ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಿನಿಮಾ ರಂಗದವರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸದೆ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ನಟ್ಟು, ಬೋಲ್ಟ್ ಸರಿ ಮಾಡುವುದು ಗೊತ್ತು ಎಂದಿದ್ದರು. ನಟ್ಟು ಬೋಲ್ಟ್ ಹೇಳಿಕೆಗೆ ವಿಪಕ್ಷಗಳು, ಸಿನಿ ರಂಗದ ಹಲವು ದಿಗ್ಗಜರು ಪ್ರತಿಕ್ರಿಯೆ ನೀಡಿ ಟೀಕಿಸುತ್ತಿದ್ದಾರೆ. ಇದಕ್ಕೆ ಮಂಗಳವಾರ ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ, ಟೀಕೆ ಮಾಡಲೆಂದೇ ನಟ್ಟು ಬೋಲ್ಟ್ ಪದ ಬಳಕೆ ಮಾಡಿದ್ದೇನೆ. ಆದರೆ ಎಚ್ಚರಿಕೆ ಕೊಡಬೇಕಲ್ಲವೇ ಎಂದರು.
ನಾಗಾಭರಣ ಅವರ ಹೇಳಿಕೆ ಕೇಳಿದ್ದೇನೆ. ಆಹ್ವಾನ ಮಾಡದೆ ಇರಬಹುದು. ಇಲ್ಲಿ ನಮ್ಮ ಇಲಾಖೆ ತಪ್ಪಿದೆಯೋ ಯಾರ ತಪ್ಪಿದೆಯೋ ಗೊತ್ತಿಲ್ಲ. ನಾನು ಯಾರಿಗೆಲ್ಲ ಎಷ್ಟು ಸಹಾಯ ಮಾಡಿದ್ದೇನೆ ಅನ್ನೋದು ನನಗೆ ಗೊತ್ತು. ಸಹಾಯ ತೆಗೆದುಕೊಂಡವರಿಗೆ ಗೊತ್ತು. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮಾಡುತ್ತಿರುವುದು ಚಿತ್ರರಂಗ ಬೆಳೆಯಲಿ ಎಂದು. ಅವರೆ ಪ್ರಚಾರ ಮಾಡಿಕೊಳ್ಳದೆ ಹೋದರೆ ಮುಂಜಾನೆ, ಸಂಜೆ ನಾವು ಮಾಡಲು ಆಗುತ್ತಾ? ನಾನು ಸಿನಿಮಾ ನೋಡದೆ ಇರುತ್ತೇನೆ. ಅವರು ಬೆಳೆಯಬೇಕು ಅಂದರೆ ಜನ, ಸರ್ಕಾರ ಬೇಕು ಅಂತಾ ಹೇಳಿದರು.