ಪ್ರಜಾಸ್ತ್ರ ಸುದ್ದಿ
ರಾಮನಗರ(Ramanagara): ಜಿಲ್ಲೆಯ ಬಿಡದಿ ರೈಲು ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ಅಪರಿಚಿತನೊಬ್ಬ ಬೆದರಿಕೆ ಕರೆ ಮಾಡಿದ್ದು, ತಪಾಸಣೆ ನಡೆಸಲಾಗುತ್ತಿದೆ. ಬಾಂಬ್ ನಿಷ್ಕ್ರೀಯ ದಳ, ಶ್ವಾನ ದಳ, ಪೊಲೀಸರು ರೈಲ್ವೆ ಪೊಲೀಸರು ಮಂಗಳವಾರ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ. ಸೋಮವಾರ ರಾತ್ರಿ ಸುಮಾರು 12 ಗಂಟೆ ವೇಳೆ ಫೋನ್ ಮಾಡಿ ಬಾಂಬ್ ಇರುವ ಬಗ್ಗೆ ಹೇಳಿದ್ದಾನಂತೆ. ರಾತ್ರಿ ತಪಾಸಣೆ ನಡೆಸಿದ್ದು, ಏನೂ ಸಿಕ್ಕಿಲ್ಲ.
ಮಂಗಳವಾರ ಮುಂಜಾನೆಯೂ ಶೋಧ ಕಾರ್ಯ ನಡೆಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಹುಸಿ ಬೆದರಿಕೆ ಕರೆ ಎಂದು ಹೇಳಲಾಗುತ್ತಿದೆ. ಫೋನ್ ಮಾಡಿದ್ದು ಯಾರು, ಎಲ್ಲಿಂದ ಕಾಲ್ ಬಂದಿದೆ ಅನ್ನೋದರ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ದೇಶದ ಪ್ರಮಖ ನಗರಗಳ ಶಾಲೆಗಳು, ರೈಲು ನಿಲ್ದಾಣಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಕರೆಗಳು ಬರುತ್ತಲೇ ಇವೆ.