ಪ್ರಜಾಸ್ತ್ರ ಸುದ್ದಿ
ನವದೆಹಲಿ(New delhi): ಅನಾಮದೇಯ ವ್ಯಕ್ತಿಯೊಬ್ಬ ಕರೆ ಮಾಡಿ ಕ್ಲಸ್ಟರ್(cluster bus) ಬಸ್ ನಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಕರೆ ಮಾಡಿದ ಘಟನೆ ನಜಾಫ್ ಗಢದಲ್ಲಿ ಶನಿವಾರ ರಾತ್ರಿ ಸುಮಾರು 11.50ರ ಸುಮಾರಿಗೆ ನಡೆದಿದೆ. ಇದರಿಂದಾಗಿ ನಗರದಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಬಾಂಬ್ ನಿಷ್ಕ್ರೀಯ ದಳದವರು, ಅಗ್ನಿ ಶಾಮಕ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಬಂದು ಬಸ್ ತಪಾಸಣೆ ನಡೆಸಿದಾಗ ಯಾವುದೇ ರೀತಿಯ ವಸ್ತುಗಳು ಪತ್ತೆಯಾಗಿಲ್ಲ. ಹೀಗಾಗಿ ಇದೊಂದ ಹುಸಿ ಬಾಂಬ್ ಬೆದರಿಕೆ ಕರೆ ಎಂದು ಹೇಳಲಾಗಿದೆ.
ಬಾಂಬ್(Bomb) ಬೆದರಿಕೆ ಕರೆ ಬಂದ ಹಿನ್ನಲೆಯಿಂದಾಗಿ ನರೇಲಾ ಹಾಗೂ ನಜಾಫ್ ಗಢ ನಡವೆ ಸಂಚರಿಸುವ ಕ್ಲಸ್ಟರ್ ಬಸ್ ಗಳನ್ನು ತಪಾಸಣೆ ನಡೆಸಲಾಯಿತು. ಬಸ್ ನಲ್ಲಿ ತಂತಿಗಳನ್ನು ಸುತ್ತಿದ ಕೆಲವೊಂದಿಷ್ಟು ವಸ್ತುಗಳು ಬಿಟ್ಟರೆ ಬೇರೆ ಏನೂ ಪತ್ತೆಯಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಇಲಾಖೆ(DFS) ಅಧಿಕಾರಿಗಳು ತಿಳಿಸಿದ್ದಾರೆ.