Ad imageAd image

ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಬೆದರಿಕೆ

Nagesh Talawar
ಕೊಡಗು ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಬೆದರಿಕೆ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಕೊಡಗು(Kodagu): ಜಿಲ್ಲಾ ನ್ಯಾಯಾಲಯದ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಹೀಗಾಗಿ ಸೋಮವಾರ ಬಾಂಬ್ ನಿಷ್ಕ್ರೀಯ ದಳ, ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ವಕೀಲರನ್ನು ಸಾರ್ವಜನಿಕರನ್ನು ಕೋರ್ಟ್ ಆವರಣದಿಂದ ಹೊರಗೆ ಕಳಿಸಿದ್ದು, ತಪಾಸಣೆ ನಡೆಸಲಾಗುತ್ತಿದೆ.

ಯಾರು ಈ ರೀತಿಯಾಗಿ ಬೆದರಿಕೆ ಮೇಲ್ ಮಾಡಿದ್ದಾರೆ, ಎಲ್ಲಿಂದ ಮಾಡಲಾಗಿದೆ. ಇದರ ಹಿಂದೆ ಇರುವವರು ಯಾರು ಅನ್ನೋದು ಸೇರಿದಂತೆ ಎಲ್ಲ ರೀತಿಯಿಂದ ತನಿಖೆ ನಡೆಸಲಾಗುತ್ತಿದೆ. ಬಾಂಬ್ ಇಡಲಾಗಿದೆ ಅನ್ನೋ ಬೆದರಿಕೆಯ ಮೇಲ್ ನಿಂದ ಸಾರ್ವನಿಕರಲ್ಲಿ ಆತಂಕ ಮೂಡಿದೆ.

WhatsApp Group Join Now
Telegram Group Join Now
Share This Article