ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ಇ-ಮೇಲ್ ಮೂಲಕ ಹೈಕೋರ್ಟ್ ನ ಧಾರವಾಡ ಪೀಠಕ್ಕೆ ಬಾಂಬ್ ಬೆದರಿಕೆ ಬಂದಿದೆ. ಹೀಗಾಗಿ ಪೊಲೀಸರು ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಮೂರು ಅಂತಿಸ್ತಿನ ಕಟ್ಟಡ, ಪಾರ್ಕ್, ಕೋರ್ಟ್ ಸುತ್ತಲಿನ ಜಾಗ ಸೇರಿದಂತೆ ಎಲ್ಲ ಕಡೆ ತಪಾಸಣೆ ನಡೆಸಿದ್ದಾರೆ. ಸಧ್ಯ ಯಾವುದೇ ರೀತಿಯ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲವೆಂದು ಎಸ್ಪಿ ಗುಂಜನ್ ಆರ್ಯ ತಿಳಿಸಿದ್ದಾರೆ.




