ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಯುವ ತಲೆಮಾರಿನ ಬರಹಗಾರರಲ್ಲಿ ನಾಗೇಶ ತಳವಾರ ಅವರು ಸಹ ಒಬ್ಬರು. ವೃತ್ತಿಯಲ್ಲಿ ಪತ್ರಕರ್ತರಾಗಿದ್ದು, ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ‘ಚಿಮಣಿ ಬೆಳಕಿನ ಬದುಕು’ ಇವರ ಮೂರನೇ ಪುಸ್ತಕ. ಈ ಕೃತಿಯ(Book) ವಿಶೇಷ ಏನಂದರೆ, ಮೊದಲು ರಂಗ ಪ್ರಯೋಗಗೊಂಡು ನಂತರ ಪುಸ್ತಕ ರೂಪದಲ್ಲಿ ಬಂದಿರುವುದು. ಧಾರವಾಡದ ರಂಗಾಯಣದಲ್ಲಿ 2017ರಲ್ಲಿ ಸೈಕಲ್ ಡ್ರೀಮ್ಸ್ ಹೆಸರಿನಲ್ಲಿ ಪ್ರದರ್ಶನಗೊಂಡ ನಾಟಕವೇ(Drama) ಈಗ ಪುಸ್ತಕವಾಗಿದೆ.
ಫೆಬ್ರವರಿ 2024ರಲ್ಲಿ ಮೈಸೂರಿನಲ್ಲಿ ಪುಸ್ತಕ ಬಿಡುಗಡೆಗೊಂಡಿದೆ. ಹಕ್ಕಿಪಿಕ್ಕಿ ಜನಾಂಗವನ್ನು ಕೇಂದ್ರವಾಗಿಟ್ಟುಕೊಂಡು ಭಾರತದಲ್ಲಿನ ಬುಡಕಟ್ಟು(Tribe) ಸಮುದಾಯಗಳ ಬದುಕನ್ನು ಕಟ್ಟಿಕೊಂಡು ಪ್ರಯತ್ನ ಮಾಡಲಾಗಿದೆ. ಸಿಂದಗಿಯ ಮಾಧ್ಯಮರಂಗ ಫೌಂಡೇಶನ್ ಪುಸ್ತಕ ಪ್ರಕಟಿಸಿದೆ. ಪುಸ್ತಕದ ಬೆಲೆ 80 ರೂಪಾಯಿ. ಆಸಕ್ತರು 9035397009 ನಂಬರ್ ಗೆ ಸಂಪರ್ಕಿಸುವ ಮೂಲಕ ಖರೀದಿಸಬಹುದು.
ನಾಗೇಶ ತಳವಾರ ಅವರ ಇತರೆ ಕೃತಿಗಳು: ಅವ್ವ ಮತ್ತು ಸೈಕಲ್(ಕಥಾ ಸಂಕಲನ), ದಂದುಗ(ಕಾದಂಬರಿ) ಪ್ರಕಟಗೊಂಡಿವೆ. ಕಥಾ ಸಂಕಲನಕ್ಕೆ ಉರಿಲಿಂಗಪೆದ್ದಿ ಪುಸ್ತಕ ಬಹುಮಾನ ಬಂದಿದೆ.