Ad imageAd image

ಪುಸ್ತಕ ಪರಿಚಯ: ನಿಜಶರಣ ಅಂಬಿಗರ ಚೌಡಯ್ಯ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದ ಶಾಂತಗಂಗಾಧರ ಮಹಾಸ್ವಾಮಿಗಳು ಬರೀ ಪುರಾಣ, ಪ್ರವಚನಕ್ಕೆ ಸೀಮಿತವಾಗಿಲ್ಲ.

Nagesh Talawar
ಪುಸ್ತಕ ಪರಿಚಯ: ನಿಜಶರಣ ಅಂಬಿಗರ ಚೌಡಯ್ಯ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬೂದಿಹಾಳ ಪಿ.ಎಚ್ ಗ್ರಾಮದ ಶಾಂತಗಂಗಾಧರ ಮಹಾಸ್ವಾಮಿಗಳು ಬರೀ ಪುರಾಣ, ಪ್ರವಚನಕ್ಕೆ ಸೀಮಿತವಾಗಿಲ್ಲ. ಬರವಣಿಗೆಯ ಮೂಲಕ ಸಮಾಜ ತಿದ್ದುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಹತ್ತಾರ ಪುಸ್ತಕಗಳನ್ನು ನಾಡಿಗೆ ಅರ್ಪಿಸಿದ್ದಾರೆ. ಇತ್ತೀಚೆಗೆ ಬೆಳಗಾವಿಯಲ್ಲಿ ಬಿಡುಗಡೆಗೊಂಡ ‘ನಿಜಶರಣ ಅಂಬಿಗರ ಚೌಡಯ್ಯ’ ಗದ್ಯ ಪುರಾಣ ಪುಸ್ತಕ ಶರಣ ಪರಂಪರೆಯಲ್ಲಿ ನಿಷ್ಠರ, ಕಠೋರ ಮಾತುಗಳಿಂದಲೇ ಹಾಗೂ ತಮ್ಮ ಹೆಸರನ್ನೇ ಅಂಕಿತನಾಮ ಮಾಡಿಕೊಂಡಿರುವ ಅಂಬಿಗರ(ambigara choudayya) ಚೌಡಯ್ಯನವರ ವಚನಗಳ ವಿಶ್ಲೇಷಣಾತ್ಮಕ ಬರಹಗಳಿಂದ ಕೂಡಿದೆ.

ಸಿಂದಗಿ ಪಟ್ಟಣದಲ್ಲಿ ಗುರುದೇವ ಆಶ್ರಮದ ಮೂಲಕ ಶರಣ ತತ್ವವನ್ನು ಪ್ರಚುರ ಪಡಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಪುರಾಣ, ಪ್ರವಚನಗಳಂತೆ ಇವರ ಪುಸ್ತಕಗಳು ಸಹ ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಆಸಕ್ತರು ಈ ಪುಸ್ತಕ ಖರೀದಿಗಾಗಿ 96636336441 ನಂಬರ್ ಗೆ ಸಂಪರ್ಕಿಸಬಹುದು.

ಶಾಂತಗಂಗಾಧರ ಶ್ರೀಗಳ ಇತರೆ ಕೃತಿಗಳು: ಅಂಬಿಗರ ಚೌಡಯ್ಯನ ಸಮಗ್ರ ವಚನ ವ್ಯಾಖ್ಯಾನ, ಶ್ರೀ ಶೃದ್ದಾನಂದ ಮಹಾಸ್ವಾಮಿಗಳ ಪುರಾಣ, ಶ್ರೀ ಗಂಗಾ ಮಹಾಪುರಾಣ, ಕ್ರಾಂತಿ ವಚನಗಳು, ಜಾಗೃತ ಗೀತೆಗಳು, ವ್ಯಸನ್ಮುಕ್ತಿ ಹಾಸ್ಯ ಕಥೆಗಳು, ಕುಮಾರ ಚೌಡಯ್ಯನ ವಚನಗಳು, ರಸಲಿಂಗದ ಪರಿಚಯ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

WhatsApp Group Join Now
Telegram Group Join Now
Share This Article