ನಾಳೆ ‘ಸಿದ್ಧಮಾದರಿಗಳಾಚೆಗೆ’ ಕೃತಿ ಬಿಡುಗಡೆ

296

ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ

ಮೈಸೂರು: ನಗರದ ಸ್ವಜನ್ಯ ಕಲಾ ವೇದಿಕೆ ವತಿಯಿಂದ ಲೇಖಕಿ ಗಿರಿಜಾಶಾಸ್ತ್ರಿ ಅವರ ‘ಸಿದ್ಧಮಾದರಿಗಳಾಚೆಗೆ’ ಅನ್ನೋ ಕೃತಿ ಅಕ್ಟೋಬರ್ 29, 2023 ಭಾನುವಾರ ಬೆಳಗ್ಗೆ 10.30 ಬಿಡುಗಡೆಯಾಗಲಿದೆ. ನಗರದ ಧ್ವನ್ಯಾಲೋಕ ಸಭಾಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ನಿವೃತ್ತ ಕನ್ನಡ ಪ್ರಾಧ್ಯಾಪಕ ಎ.ವಿ ಸೂರ್ಯನಾರಾಯಣಸ್ವಾಮಿ ಅವರು ಪುಸ್ತಕ ಬಿಡುಗಡೆಗೊಳಿಸಲಿದ್ದಾರೆ.

ಲೇಖಕಿ ಡಾ.ಕೆ ಷರೀಫಾ ಪುಸ್ತಕ ಕುರಿತು ಮಾತನಾಡಲಿದ್ದಾರೆ. ಸ್ವಜನ್ಯ ಕಲಾ ವೇದಿಕೆ ಅಧ್ಯಕ್ಷ, ಯುವ ಕವಿ ಎಸ್. ಶಿಶಿರಂಜನ್(ಶಿಶಿರ) ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ರೂಪಾ ಪ್ರಕಾಶನದ ಯು.ಎಸ್ ಮಹೇಶ್, ಲೇಖಕಿ ಗಿರಿಜಾಶಾಸ್ತ್ರಿ ಅವರ ಉಪಸ್ಥಿತಿ ಇರಲಿದೆ. ಸಾಹಿತ್ಯದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಕೋರಲಾಗಿದೆ.
error: Content is protected !!