ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಪುಸ್ತಕ ಸೊಗಸು, ಮುದ್ರಣ ಸೊಗಸು ಬಹುಮಾನ ಪ್ರಕಟವಾಗಿದೆ. 2022, 2023 ಹಾಗೂ 2024ನೇ ಸಾಲಿನ ಬಹುಮಾನವನ್ನು ಘೋಷಿಸಲಾಗಿದೆ. 2022ನೇ ಸಾಲಿನ ಪುಸ್ತಕ ಸೊಗಸು ಮೊದಲ ಬಹುಮಾನ ಕೇಶವ ಮಳಗಿ ಅವರ ‘ಗೇಬ್ರಿಯಲ್ ಗಾರ್ಸಿಯ ಮಾರ್ಕೇಸ್ ಗದ್ಯ ಗಾರುಡಿ’ ಮೊದಲ ಬಹುಮಾನ ಪಡೆದಿದೆ. ಜಿ.ಕೆ ದೇವರಾಜಸ್ವಾಮಿ ಅವರ ‘ಅಧಿಷ್ಠಾನ ಬಾಯಿಪಾಠ ಪುಸ್ತಕ’ ಕೃತಿ ದ್ವಿತೀಯ ಹಾಗೂ ರವಿಕುಮಾರ ನೀಹ ಅವರ ‘ಅರಸು ಕುರನ್ಗರಾಯ’ ಪುಸ್ತಕ ತೃತಿಯ ಬಹುಮಾನ ಪಡೆದಿದೆ. ಈ ಬಹುಮಾನವು 25, 20 ಹಾಗೂ 10 ಸಾವಿರ ರೂಪಾಯಿ ಹೊಂದಿದೆ.
2023ನೇ ಸಾಲಿನ ಬಹುಮಾನಕ್ಕೆ ಡಾ.ಆರ್.ಎಚ್ ಕುಲಕರ್ಣಿ ಹಾಗೂ ಎಚ್.ಎ.ಅನಿಲ್ ಕುಮಾರ್ ಅವರ ‘ದೃಶ್ಯಕಲಾ ಕಮಲ’ ಪುಸ್ತಕ ಮೊದಲ ಬಹುಮಾನ ಪಡೆದಿದೆ. ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ‘ಕಾಡುಗೊಲ್ಲ ಬುಡಕಟ್ಟು ಕುಲಕಥನ’ ದ್ವೀತಿಯ ಹಾಗೂ ಡಾ.ಮಲ್ಲಿಕಾರ್ಜುನ ಸಿ.ಬಾಗೋಡಿ ಅವರ ಭಿತ್ತಿ ತೃತಿಯ ಬಹುಮಾನ ಪಡೆದಿದೆ. 2024ನೇ ಸಾಲಿನಲ್ಲಿ ಪ್ರೊ.ಕೆ.ಸಿ ಶಿವಾರೆಡ್ಡಿ ಅವರ ‘ಕೆ.ಪಿ ಪೂರ್ಣಚಂದ್ರ ತೇಜಸ್ವಿ ಸಮಗ್ರ ಕೃತಿ ಜಗತ್ತು ಸಂಪುಟಗಳು’ ಪ್ರಥಮ, ಕೆ.ಸಿ ಶ್ರೀನಾಥ್ ಅವರ ಶಕ್ತಿನದಿ ಶರಾವತಿ ಪುಸ್ತಕ ದ್ವಿತೀಯ ಹಾಗೂ ಸ್ವಾಮಿ ಪೊನ್ನಾಚಿ ಅವರ ಕಾಡು ಹುಡುಗನ ಹಾಡು ಪಾಡು ಪುಸ್ತಕ ತೃತೀಯ ಬಹುಮಾನ ಪಡೆದಿದೆ.