ಪ್ರಜಾಸ್ತ್ರ ಸುದ್ದಿ
ಲೀಡ್ಸ್(Leeds): ಇಲ್ಲಿನ ಹೆಡ್ಲಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ವೇಗದ ಬೌಲರ್ ಜಸ್ ಪ್ರಿತ್ ಬೂಮ್ರಾ ನೂತನ ದಾಖಲೆ ಬರೆದಿದ್ದಾರೆ. ಸೇನಾ(SENA) ದೇಶಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಏಷ್ಯದ ಬೌಲರ್ ಆಗಿದ್ದಾರೆ. ಪಾಕಿಸ್ತಾನದ ಖ್ಯಾತ ಬೌಲರ್ ವಾಸಿಂ ಅಕ್ರಂ ದಾಖಲೆ ಮುರಿದಿದ್ದಾರೆ. ಸೇನಾ ದೇಶಗಳು ಎಂದರೆ ಸೌಥ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಅನ್ನೋದು. ಈ ದೇಶಗಳಲ್ಲಿ ಆಡಿದ ಪಂದ್ಯಗಳಲ್ಲಿ ಪಾಕಿಸ್ತಾನದ ವಸಿಂ ಅಕ್ರಂ 55 ಇನ್ನಿಂಗ್ಸ್ ಗಳಲ್ಲಿ 146 ವಿಕೆಟ್ ಪಡೆದಿದ್ದರು. ಈಗ ಬೂಮ್ರಾ 60 ಇನ್ನಿಂಗ್ಸ್ ಗಳಲ್ಲಿ 148 ವಿಕೆಟ್ ಪಡೆದಿದ್ದಾರೆ.
ಮೊದಲ ಇನ್ನಿಂಗ್ಸ್ ಆಡಿದ ಭಾರತ ತಂಡದ ನಾಯಕ ಗಿಲ್, ವಿಕೆಟ್ ಕೀಪರ್ ಪಂತ್, ಜೈಸ್ವಾಲ್ ಶತಕ ಸಿಡಿಸಿದರು. ಹೀಗಾಗಿ 471 ರನ್ ಗಳಿಸಿತು. ಈಗ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ಆಡುತ್ತಿದೆ. 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದೆ. ಮೊದಲ ಓವರ್ ನ ಕೊನೆಯ ಬೌಲ್ ನಲ್ಲಿ ಝಾಕ್ ಕ್ರಾಲಿ(4) ಬೂಮ್ರಾ ವಿಕೆಟ್ ಪಡೆದರು. ಬೆನ್ ಡಕೆಟ್(64), ಜೋ ರೂಟ್(28) ಅವರನ್ನು ಪೆವಿಲಿಯನ್ ಗೆ ಕಳಿಸಿದ ಬೂಮ್ರಾ ಈ ದಾಖಲೆ ನಿರ್ಮಿಸಿದರು. ಪೊಪೆ ಅಜೇಯ 100 ರನ್ ಹಾಗೂ ಹ್ಯಾರಿ ಬ್ರೂಕ್ ಅಜೇಯ 0 ರನ್ ಗಳೊಂದಿಗೆ ಕ್ರಿಸ್ ನಲ್ಲಿದ್ದಾರೆ. 2ನೇ ದಿನ ಮುಗಿದಿದ್ದು, ಇನ್ನು 262 ರನ್ ಮುಟ್ಟಿ ಭಾರತಕ್ಕೆ ಸವಾಲು ನೀಡಬೇಕಿದೆ.