ಪ್ರಜಾಸ್ತ್ರ ಸುದ್ದಿ
ವಡೋದರಾ(Vadodara): ಜಿಲ್ಲೆಯ ಪಾದರಾ ಬಳಿಯ ಮಹಿಸಾಗರ ನದಿಗೆ ನಿರ್ಮಿಸಲಾಗಿದ್ದ ಗಂಭೀರ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಬುಧವಾರ ರಾತ್ರಿ ವೇಳೆ 10 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿತ್ತು. ನದಿಯಲ್ಲಿನ ಕಾರ್ಯಾಚರಣೆ ವೇಳೆ ಇನ್ನೂ ಮೂವರ ಮೃತದೇಹ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಬುಧವಾರ ಸೇತುವೆ ಕುಸಿದಿದ್ದು, ಹಲವು ವಾಹನಗಳು ನದಿಗೆ ಬಿದ್ದಿವೆ. 1985ರಲ್ಲಿ ಸೇತುವೆ ಕಟ್ಟಲಾಗಿದೆ. 900 ಮೀಟರ್ ಉದ್ದವಿದ್ದು, 23 ಕಂಬಗಳು ಸೇತುವೆಗಿವೆ. ಗಾಯಾಳುಗಳನ್ನು ಎಸ್ಎಸ್ ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಧಾನಿ ಮೋದಿ ಈಗಾಗ್ಲೇ ಮೃತಪಟ್ಟ ಕುಟುಂಬಗಳಿಗೆ 2 ಲಕ್ಷ ರೂಪಾಯಿ, ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ.