Ad imageAd image

Paris Olympics: ಹಾಕಿಯಲ್ಲಿ ಭಾರತಕ್ಕೆ ಕಂಚು

ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್-2024 ಕ್ರೀಡಾಕೂಟದಲ್ಲಿ ಇಂದು ಪುರುಷರ ಹಾಕಿ ಪಂದ್ಯದಲ್ಲಿ ಕಂಚಿಗಾಗಿ

Nagesh Talawar
Paris Olympics: ಹಾಕಿಯಲ್ಲಿ ಭಾರತಕ್ಕೆ ಕಂಚು
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್-2024 ಕ್ರೀಡಾಕೂಟದಲ್ಲಿ ಇಂದು ಪುರುಷರ ಹಾಕಿ(hockey) ಪಂದ್ಯದಲ್ಲಿ ಕಂಚಿಗಾಗಿ ನಡೆದ ಹೋರಾಟದಲ್ಲಿ ಭಾರತ ತಂಡ ಸ್ಪೇನ್(spain) ವಿರುದ್ಧ 2-1 ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ ಕಂಚಿಗೆ ಹಾಕಿ ಆಟಗಾರರು ಕೊರಳು ನೀಡಿದ್ದಾರೆ.

ಎರಡು ಗೋಲು ಬಾರಿಸಿದ ಹಾಕಿ ತಂಡದ ನಾಯಕ ಹರ್ಮನ್ ಪ್ರಿತ್ ಸಿಂಗ್ ಗೆಲುವಿಗೆ ಕಾರಣರಾದರು. ಕಳೆದ ಮೂರು ವರ್ಷಗಳ ಹಿಂದೆ ಟೊಕಿಯೊದಲ್ಲಿಯೂ ಕಂಚು(Bronze) ಜಯಿಸಿದ್ದ ಭಾರತ ಆ ಸಾಧನೆ ಮತ್ತೊಮ್ಮೆ ಮಾಡಿತು. ಈ ಜಯದೊಂದಿಗೆ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ ಹಾಕಿಗೆ ವಿದಾಯ ಹೇಳಿದ್ದಾರೆ. ಭಾರತ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ 8 ಬಾರಿ ಚಿನ್ನದ ಪದಕ ಗೆದ್ದು 8 ಬಾರಿ ಚಾಂಪಿಯನ್ ಆಗಿದೆ. ಆದರೆ, ಕಳೆದ 44 ವರ್ಷಗಳಿಂದ ಫೈನಲ್ ಗೆ ಬರದೆ ಹೋಗುತ್ತಿದೆ.

WhatsApp Group Join Now
Telegram Group Join Now
Share This Article