ಪ್ರಜಾಸ್ತ್ರ ಸುದ್ದಿ
ಪ್ಯಾರಿಸ್(Paris): ಒಲಿಂಪಿಕ್ಸ್ ಟೂರ್ನಿಯಲ್ಲಿ ಭಾರತದ ಯುವ ಶೂಟರ್ ಮನು ಭಾಕರ್ 2ನೇ ಬಾರಿಗೆ ಕಂಚು ಪದಕ ಜಯಿಸುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಲಿಂಪಿಕ್ಸ್ ನ(Olympics) ಒಂದೇ ಟೂರ್ನಿಯಲ್ಲಿ 2 ಪದಕ ಗಳಿಸಿದ ಮೊದಲ ಅಥ್ಲಟಿಕ್ ಎನ್ನುವ ಸಾಧನೆ ಮಾಡಿದ್ದಾರೆ. 10 ಮೀಟರ್ ಪಿಸ್ತೂಲ್ ಫೈನಲ್ ಪಂದ್ಯದಲ್ಲಿ ಕಂಚು ಪದಕ ಗೆದ್ದಿದ್ದಾರೆ.
10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಸರಬ್ಜೋತ್ ಸಿಂಗ್(Sarabjot Singh) ಹಾಗೂ ಮನು ಭಾಕರ್(Manu Bhaker) ಜೋಡಿ ಕಂಚಿನ ಪದಕ್ಕೆ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದೆ. ದಕ್ಷಿಣ ಕೋರಿಯಾದ ಯೆ ಜಿನ್ ಒಹ್ ಹಾಗೂ ವೊನೊಹೊ ಲೀ ವಿರುದ್ಧ 16-10 ಅಂಕಗಳೊಂದಿಗೆ ಜಯ ಸಾಧಿಸಿದ್ದಾರೆ. ಈ ಮೂಲಕ ಭಾರತೀಯ ಜೋಡಿ ಭರವಸೆಯನ್ನು ಹುಸಿಗೊಳಿಸದೆ ಪದಕ ಜಯಿಸಿದೆ.