Ad imageAd image

ಸ್ವಪ್ನಿಲ್ ಕುಸಾಲೆಗೆ ಕಂಚು.. ಭಾರತಕ್ಕೆ 3ನೇ ಪದಕ

Nagesh Talawar
ಸ್ವಪ್ನಿಲ್ ಕುಸಾಲೆಗೆ ಕಂಚು.. ಭಾರತಕ್ಕೆ 3ನೇ ಪದಕ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಪ್ಯಾರಿಸ್(Paris): ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ 3ನೇ ಪದಕ ಬಂದಿದೆ. 50 ಮೀಟರ್ ವಿಭಾಗದ ರೈಫಲ್ ಪೊಸಿಷ್ ನಲ್ಲಿ ಸ್ವಪ್ನಿಲ್ ಕುಸಾಲೆ(swapnil kusale) ಕಂಚು ಪದಕ ಗೆಲ್ಲುವ ಮೂಲಕ ದೇಶಕ್ಕೆ 3ನೇ ಪದಕ ತಂದುಕೊಟ್ಟಿದ್ದಾರೆ. ಪುರುಷರ ಶೂಟಿಂಗ್ ವೈಯಕ್ತಿಕ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.

ಮಹಾರಾಷ್ಟ್ರ ಮೂಲದ 28 ವರ್ಷದ ಸ್ವಪ್ನಿಲ್ ಪುಣೆಯಲ್ಲಿ(Pune) ಟ್ರೇನ್ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಶೂಟಿಂಗ್ ನಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಮಹಾರಾಷ್ಟ್ರ ಕ್ರೀಡಾ ಯೋಜನೆಯಲ್ಲಿ ಸ್ವಪ್ನಿಲ್ ಆಯ್ಕೆ ಆಗಿದ್ದರು. ಒಲಿಂಪಿಕ್ಸ್ ನಲ್ಲಿ ಕಂಚು ಪದಕದ ಸಾಧನೆ ಮಾಡಿದ್ದು, ಹಿರಿಯ ಅಥ್ಲೆಟ್ಸ್ ಅಭಿನವ್ ಬಿಂದ್ರಾ ಸೇರಿದಂತೆ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

WhatsApp Group Join Now
Telegram Group Join Now
Share This Article