ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಡಿನೋಟಿಫಿಕೇಷನ್(Illegal Denotification) ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಲೋಕಾಯುಕ್ತ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ನೋಟಿಸ್ ನೀಡಿದ್ದರು. ಹೀಗಾಗಿ ಶನಿವಾರ ಲೋಕಾಯುಕ್ತ(Lokayukta) ತನಿಖಾಧಿಕಾರಿ ಎದುರು ಯಡಿಯೂರಪ್ಪ ಹಾಜರಾಗಿ ವಿಚಾರಣೆ ಎದುರಿಸಿದರು. ಯಡಿಯೂರಪ್ಪ(BSY), ಕುಮಾರಸ್ವಾಮಿ(HDK) ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಸಂಬಂಧ ತನಿಖೆ ತ್ವರಿತವಾಗಿ ನಡೆಯಲಿ ಎಂದು ಎರಡು ದಿನಗಳ ಹಿಂದೆ ಸರ್ಕಾರ ಹೇಳಿತ್ತು.
ಗುರುವಾರ ಮಾಧ್ಯಮಗೋಷ್ಠಿ ಮಾತನಾಡಿದ ಸಚಿವರಾದ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಕೃಷ್ಣಬೈರೇಗೌಡ ಅವರು, ಬೆಂಗಳೂರು ಉತ್ತರ ಕಸಬಾ ಹೋಬಳಿಯ ಗಂಗೇನಹಳ್ಳಿಯಲ್ಲಿ 1.11 ಎಕರೆ ಜಮೀನು ಅಕ್ರಮ ಡಿನೋಟಿಫಿಕೇಷನ್ ಮಾಡಿರುವ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. 2007-10ರ ನಡುವೆ ಅಕ್ರಮ ನಡೆದಿದೆ. ಮುಂದೆ 2010ರಲ್ಲಿ ಕುಮಾರಸ್ವಾಮಿ ಸೋದರಮಾವ ಚನ್ನಪ್ಪ ಹೆಸರಿಗೆ ನೋಂದಣಿಯಾಗಿದೆ ಎಂದು ಹೇಳಿದ್ದರು.