ಪ್ರಜಾಸ್ತ್ರ ಸಿನಿಮಾ ಡೆಸ್
ಗ್ರೀಕ್ ಗೋಲ್ಡನ್ ರೇಷಿಯೋ(Greek Golden ratio) ಬಿಡುಗಡೆ ಮಾಡಿರುವ ವಿಶ್ವದ ಟಾಪ್ 10 ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ಬಾಲಿವುಡ್ ನ ಏಕೈಕ ನಟಿ ಸ್ಥಾನ ಪಡೆದಿದ್ದಾರೆ. ಉಳಿದಂತೆ ಬೇರೆ ಬೇರೆ ದೇಶದ ನಟಿಯರು 10ರ ಸಾಲಿನಲ್ಲಿ ಕಾಣಿಸಿಕೊಂಡಿದ್ದು, ಅನ್ಯಾ ಟೇಲರ್ ಜಾಯ್(Anay Taylor Joy) ಟಾಪ್ 1ರಲ್ಲಿ ಇದ್ದಾರೆ. ಲಂಡನ್ ನಲ್ಲಿ ಸೆಂಟರ್ ಫಾರ್ ಅಡ್ವಾನ್ಸ್ಡ್ ಫೇಶಿಯಲ್ ಕಾಸ್ಮೆಟಿಕ್ ಮತ್ತು ಪ್ಲ್ಯಾಸ್ಟಿಕ್ ಸರ್ಜರಿ ಮಾಡುತ್ತಿರುವ ಡಾ.ಡಿ ಸಿಲ್ವಾ ಇದರ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ದೈಹಿಕ ಸೌಂದರ್ಯದಲ್ಲಿ ಪರಿಪೂರ್ಣತೆಯ ವಿಚಾರದಲ್ಲಿ ಮುಖದ ಎಲ್ಲ ಅಂಶಗಳನ್ನು ಅಳೆತ ಮಾಡಿದಾಗ ಕಣ್ಣು, ಹುಬ್ಬುಗಳಿಂದ ಅನ್ಯಾ ಟೇಲರ್ ಕಾಸ್ಮೆಟಿಕ್ ಹೆಚ್ಚು ಅಂಕ ಗಳಿಸಿದ್ದಾರೆ ಎಂದಿದ್ದಾರೆ.
ಗೋಲ್ಡನ್ ರೇಷಿಯೋ ನಡೆಸಿದ ಸಮೀಕ್ಷೆಯಲ್ಲಿ ಸೌಂದರ್ಯ, ಎತ್ತರ, ದೇಹ, ಮಾತು ಸೇರಿದಂತೆ ಹಲವು ಅಂಶಗಳನ್ನು ಇದರಲ್ಲಿ ಪರಿಗಣಿಸಲಾಗುತ್ತೆ. ಅದರಲ್ಲಿ ಅನ್ಯಾ ಶೇಕಡ 94.66ರಷ್ಟು ಅಂಕ ಗಳಿಸಿದ್ದಾರೆ. ಝೆಂಡಯಾ ಶೇ.94.37, ಬೆಲ್ಲಾ ಹಡಿದ್ ಶೇ.94.35, ಮಾರ್ಗಾಟ್ ರಾಬಿ ಶೇ. 93.43, ಸಾಂಗ್ ಹೈ ಕ್ಯೋ ಶೇ.92.67, ಬೆಯಾನ್ಸ್ ಶೇ 92.4, ಟೇಲರ್ ಸ್ವಿಫ್ಟ್ ಶೇ.91.64, ಜಾಂಗ್ ಜಿಯಿ ಶೇ.91.51, ಆಲಿಯಾ ಭಟ್ ಶೇ.91.14 ಹಾಗೂ ನಜಾನಿನ್ ಬೊನಿಯಾಡಿ ಶೇ.90.89ರಷ್ಟು ಅಂಕ ಗಳಿಸಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ.
31 ವರ್ಷದ ಬಾಲಿವುಡ್ ನಟಿ ಆಲಿಯಾ ಭಟ್(Alia Bhatt) ಇದರಲ್ಲಿ 9ನೇ ಸ್ಥಾನ ಪಡೆದಿದ್ದಾರೆ. 2022ರಲ್ಲಿ ನಟ ರಣಬೀರ್ ಕಪೂರ್ ನೊಂದಿಗೆ ವಿವಾಹವಾಗಿದ್ದು ಹೆಣ್ಣು ಮಗು ಹೊಂದಿದ್ದಾರೆ. ಈ ನಟಿ ಮಾತ್ರ ಗೋಲ್ಡನ್ ರೇಷಿಯೋ ನಡೆಸಿದ ಸ್ಪರ್ಧೆಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಟಿಯಾಗಿದ್ದಾರೆ.