ಪ್ರಜಾಸ್ತ್ರ ಸುದ್ದಿ
ಜಡೇಶ್ ಕೆ.ಹಂಪಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತೆ ಲ್ಯಾಂಡ್ ಲಾರ್ಡ್ ಸಿನಿಮಾದಲ್ಲಿ ನಟಿ ರಚಿತಾ ರಾಮ್ ನಟಿಸುತ್ತಿದ್ದಾರೆ. ನಿಂಗವ್ವ ಪಾತ್ರದ ಮೂಲಕ ಹೊಸ ಅವತಾರದಲ್ಲಿ ರಚಿತಾ ರಾಮ್ ಕಾಣಿಸಿಕೊಳ್ಳುತ್ತಿದ್ದು, ಶೂಟಿಂಗ್ ವೇಳೆಯ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಈ ಪಾತ್ರ ನಿರ್ವಹಿಸಿದ್ದಕ್ಕೆ ನಿಜಕ್ಕೂ ಧನ್ಯವಾದ. ನಿಂಗವ್ವ ನಿಮ್ಮ ಹೃದಯವನ್ನು ಮುಟ್ಟುತ್ತಾಳೆ ಎಂದು ಬರೆದಿದ್ದಾರೆ.
ನಟ ದುನಿಯಾ ವಿಜಯ್ ನಟಿಸುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಿರ್ದೇಶಕ ಜಡೇಶ್ ಕೆ.ಹಂಪಿ ಗ್ರಾಮೀಣ ಬದುಕಿನ ಕಥೆಯನ್ನು ಕಟ್ಟುವಲ್ಲಿ ಎತ್ತಿದ ಕೈ. ಅವರ ಹಿಂದಿನ ಸಿನಿಮಾಗಳನ್ನು ನೋಡಿದರೆ ಕನ್ನಡ ಸಿನಿ ಲೋಕದಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಕೆ.ವಿ ಸತ್ಯಪ್ರಕಾಶ್ ಹಾಗೂ ಹೇಮಂತಗೌಡ ಇವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.




