ಪ್ರಜಾಸ್ತ್ರ ಸುದ್ದಿ
ಮೆಲ್ಬೋರ್ನ್(MCG): ಇಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಟೂರ್ನಿಯ 4ನೇ ಪಂದ್ಯದಲ್ಲಿ ಟೀಂ ಇಂಡಿಯಾ ಉಪ ನಾಯಕ, ಬೌಲರ್ ಜಸ್ಪ್ರೀತ್ ಬೂಮ್ರಾ 200 ವಿಕೆಟ್ ಗಳ ಸಾಧನೆ ಮಾಡಿದ್ದಾರೆ. ಆಸೀಸ್ ಸ್ಫೋಟಕ ಬ್ಯಾಟ್ಸಮನ್ ಟ್ರಾವಿಸ್ ಹೆಡ್ ವಿಕೆಟ್ ಪಡೆಯುವುದರೊಂದಿಗೆ ಈ ಸಾಧನೆ ಮಾಡಿದರು. 19.5 ಸರಾಸರಿಯಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.
ಜೋಯಲ್ ಗಾರ್ನರ್(21.0), ಕರ್ಟ್ಲಿ ಆಂಬ್ರೋಸ್(21.0), ಮಾಲ್ಕಮ್ ಮಾರ್ಷಲ್(20.9) ಕ್ಕಿಂತ ಉತ್ತಮ ಸರಾಸರಿಯಲ್ಲಿ ಬೂಮ್ರಾ 200 ವಿಕೆಟ್ ಗಳ ಕಿತ್ತಿದ್ದಾರೆ. 44ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ಜಡೇಜಾ ಜೊತೆಯಾದರು. 200ರ ಮೈಲು ಗಲ್ಲು ತಲುಪಿದ 12ನೇ ಭಾರತೀಯ ಬೌಲರ್ ಆದರು. ಇನ್ನು 4ನೇ ದಿನದ ಆಟ ಮುಗಿದಿದ್ದು, 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 228 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿದೆ.
ಮಾರ್ನಸ್ 70, ನಾಯಕ ಕಮಿನ್ಸ್ 41 ರನ್ ಗಳಿಸಿದರು. ನಾಥನ್ 41, ಸ್ಕಾಟ್ 10 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ. ಇದರೊಂದಿಗೆ 333 ರನ್ ಗಳ ಲೀಡ್ ಸಾಧಿಸಿದೆ. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 369 ರನ್ ಗಳಿಗೆ ಆಲೌಟ್ ಆಗಿದೆ. ಭಾರತ ಪರ ಬೂಮ್ರಾ 4, ಸಿರಾಜ್ 3 ವಿಕೆಟ್ ಪಡೆದು ಸಂಭ್ರಮಿಸಿದರು. ಜಡೇಜಾ 1 ವಿಕೆಟ್ ಪಡೆದರು.