ಪ್ರಜಾಸ್ತ್ರ ಸುದ್ದಿ
ಧರ್ಮಸ್ಥಳ(Dharmasthala): ಇಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಹೇಳಿದ್ದ ಸಾಕ್ಷಿ ದೂರುದಾರನನ್ನು ಈಗಾಗ್ಲೇ ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಮಾಸ್ಕ್ ಮ್ಯಾನ್ ಅಲಿಯಾಸ್ ಚಿನ್ನಯ್ಯ ತನಗೆ 10-12 ಜನರು ಬುರುಡೆ ತಂದು ಕೊಟ್ಟಿದ್ದರು. ಅವರು ಹೇಳಿದಂತೆ ಕೇಳಿದ್ದೇನೆ ಎಂದು ಕೆಲವರು ಹೆಸರು ಹೇಳಿದ್ದಾನೆ ಎನ್ನಲಾಗುತ್ತಿದೆ. ಈ ಸಂಬಂಧ ಎಸ್ಐಟಿ ಅಧಿಕಾರಿಗಳು ಆ 10-12 ವ್ಯಕ್ತಿಗಳನ್ನು ಬಂಧಿಸುವ ಸಾಧ್ಯತೆಯಿದೆ.
ಯಾಕಂದ್ರೆ ಚಿನ್ನಯ್ಯ ತೋರಿಸಿದ 13 ಜಾಗಗಳಲ್ಲಿ ಇವನು ಹೇಳಿದಷ್ಟು ಮಾನವನ ಅಸ್ತಿಪಂಜರಗಳು ಪತ್ತೆಯಾಗಿಲ್ಲ. ಎರಡ್ಮೂರು ಕಡೆ ಮಾತ್ರ ಕೆಲವೊಂದಿಷ್ಟು ಮೂಳೆಗಳು, ತಲೆ ಬುರುಡೆ ಸಿಕ್ಕಿವೆ. ಇವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ತನಗೆ ಬುರುಡೆ ತಂದುಕೊಟ್ಟಿದ್ದಾರೆ ಎನ್ನುವ ಮೂಲಕ ದೊಡ್ಡ ತಿರುವು ನೀಡಿದ್ದಾನೆ ಎನ್ನಲಾಗುತ್ತಿದೆ. ಇದೀಗ ಆತ ಯಾರೆಲ್ಲರ ಹೆಸರು ಹೇಳಿದ್ದಾನೋ ಅವರನ್ನು ಬಂಧಿಸುವ ಭಯ ಶುರುವಾಗಿದೆಯಂತೆ.