ಪ್ರಜಾಸ್ತ್ರ ಸುದ್ದಿ
ಚಿಂತೂರು(Chintoru): ಬಸ್ ವೊಂದು ಕಣಿವೆಗೆ ಬಿದ್ದ ಪರಿಣಾಮ 9 ಜನರು ಮೃತಪಟ್ಟ ದಾರುಣ ಘಟನೆ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ. ಚಿಂತೂರಿನಿಂದ ತೆಲಂಗಾಣಕ್ಕೆ ತೆರಳುತ್ತಿದ್ದ ವೇಳೆ ಈ ದುರಂತ ನಡೆದಿದೆ. ಚಾಲಕ, ಕಂಡಕ್ಟರ್ ಸೇರಿದಂತೆ 37 ಜನರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು.
ಚಿಂತೂರು-ಮರೇಡುಮಿಲ್ಲಿ ಘಾಟ್ ರಸ್ತೆಯಲ್ಲಿನ ದುರ್ಗಾ ದೇವಸ್ಥಾನದ ಹತ್ತಿರ ಶುಕ್ರವಾರ ನಸುಕಿನಜಾವ 4.30ರ ಸುಮಾರಿಗೆ ಬಸ್ ಕಣಿವೆಗೆ ಉರುಳಿದೆ. ಕನಿಷ್ಠ 9 ಜನರು ಮೃತಪಟ್ಟಿದ್ದು, 22 ಜನರು ಗಾಯಗೊಂಡಿದ್ದಾರೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ಎರಡು ತಿಂಗಳ ಹಿಂದೆ ಕರ್ನೂಲ್ ಹತ್ತಿರ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು 20 ಜನರು ಸಜೀವ ದಹನವಾಗಿದ್ದರು.




