ಪ್ರಜಾಸ್ತ್ರ ಸುದ್ದಿ
ಕನಕಪುರ(Kanakapura): ಕೆಎಸ್ಆರ್ ಟಿಸಿ ಬಸ್ ವೊಂದರ ಬ್ರೇಕ್ ಫೇಲ್ ಆಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಕನಕಪುರದಿಂದ ತಮಿಳುನಾಡಿನ ಗಡಿಭಾಗದ ಕೋಟೆ ಊರಿಗೆ ಹೊರಟ್ಟಿದ್ದ ಕೆಎಸ್ಆರ್ ಟಿಸಿ ಬಸ್ ತಗ್ಗಟ್ಟಿ ಗ್ರಾಮದ ಹತ್ತಿರ ಬರುತ್ತಿದ್ದಂತೆ ಬ್ರೇಕ್ ಫೇಲ್ ಆಗಿದೆ. ಆಗ ಬಸ್ ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ಚಾಲಕ ಮಣ್ಣಿನ ಗುಡ್ಡೆಗೆ ಗುದ್ದಿಸಿ ಭಾರಿ ಅನಾಹುತ ತಪ್ಪಿಸಿದ್ದಾರೆ.
ಸ್ಥಳೀಯರು, ಪ್ರಯಾಣಿಕರು, ಊರಿನ ಮುಖಂಡರು ಸಾರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಡಿ ಗ್ರಾಮಗಳಿಗೆ ಗುಜರಿ ಬಸ್ ಗಳನ್ನು ಬಿಡುತ್ತಾರೆ. ತಾಂತ್ರಿಕ ಸಮಸ್ಯೆಗಳಿರುವ ಬಸ್ ಗಳನ್ನು ಬಿಡಬಾರದು ಎಂದು ಹೈಕೋರ್ಟ್ ಹೇಳಿದರೂ, ಅಂತಹ ಬಸ್ ಗಳನ್ನೇ ಗಡಿ ಭಾಗದ ಗ್ರಾಮಗಳಿಗೆ ಬಿಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.