Ad imageAd image

ಕೊಕಟನೂರ, ಕೋರವಾರ, ಹಂದಿಗನೂರಿಗೆ ಬಸ್ ಸಂಪರ್ಕ

Nagesh Talawar
ಕೊಕಟನೂರ, ಕೋರವಾರ, ಹಂದಿಗನೂರಿಗೆ ಬಸ್ ಸಂಪರ್ಕ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಕನ್ನೊಳ್ಳಿ ಮಾರ್ಗವಾಗಿ ಕೊಕಟನೂರ, ಕೋರವಾರ ಮತ್ತು ಹಂದಿಗನೂರ ಗ್ರಾಮಗಳಿಗೆ ಬಸ್ ಸಂಚಾರ ಪ್ರಾರಂಭಿಸಲಾಗಿದೆ. ಆಗಸ್ಟ್ 9ರಂದು ಸಿಂದಗಿ ಘಟಕ ವ್ಯವಸ್ಥಾಪಕರಾದ ಎಂ.ಆರ್.ಲಮಾಣಿ, ಇವರಿಗೆ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು, ಮನವಿಗೆ ಸ್ಪಂದಿಸಿ ಇದೀಗ ಬಸ್ ವ್ಯವಸ್ಥೆ ಮಾಡಲಾಗಿದೆ. ಮಂಗಳವಾರ ನೂತನವಾಗಿ ಹಂದಿಗನೂರ ಗ್ರಾಮಕ್ಕೆ ಆಗಮಿಸಿದ ಬಸ್ಸಿಗೆ ಪೂಜೆ ಸಲ್ಲಿಸಿ ಕೋರವಾರ ಘಟಕ ನಿಂತ್ರಕರಿಗೆ ಮತ್ತು ಡ್ರೈವರ್ ಮತ್ತು ಕಂಡಕ್ಟರ್ ಇವರಿಗೆ ಶುಭಕೋರಿ ಸನ್ಮಾನಿಸಲಾಯಿತು.

ಈ ವೇಳೆ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ವಕ್ತಾರ ಚನ್ನಪ್ಪಗೌಡ ಎಸ್.ಬಿರಾದಾರ, ಸಿಂದಗಿ ತಾಲೂಕಾ ಉಸ್ತುವಾರಿಗಳು, ಸಿಂದಗಿ ತಾಲೂಕಾ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಬಳಬಟ್ಟಿ, ರೈತ ಘಟಕ ಅಧ್ಯಕ್ಷರು, ಗ್ರಾಮ ಘಟಕದ ಅಧ್ಯಕ್ಷ ಕುಮಾರ ಮುಳವಾಡ, ರಮೇಶ ರಾಠೋಡ,ಗ್ರಾಮದ ಮುಖಂಡರಾದ ಗೋಲ್ಲಾಳಪ್ಪಗೌಡ ಬಿರಾದಾರ, ಮಡಿವಾಳಪ್ಪಗೌಡ ಚನಗೊಂಡ, ದತ್ತುಗೌಡ ಪಾಟಿಲ, ಶಂಕ್ರಪ್ಪ ಡಾಂಗಿ, ಡಾ.ಮಡಿವಾಳಯ್ಯ ಹಿರೇಮಠ, ಮಡಿವಾಳಪ್ಪ ದ್ವಾಯಾ, ರಾಚನಗೌಡ ಚನಗೊಂಡ, ಮಡಿವಾಳಪ್ಪ ಗುಬ್ಬೇವಾಡ, ಶ್ರೀಶೈಲ ಮುಳವಾಡ, ಸಚೀನಗೌಡ ಪಾಟೀಲ, ಗ್ರಾಮ ಪಂಚಾಯತ ಸದಸ್ಯರು, ಚಿನ್ನು ಡಾಂಗಿ, ಪರಶುರಾಮ ನಾಯ್ಕೋಡಿ, ಆನಂದ ಪಾಟಿಲ, ಗೋಪಾಲಸಿಂಗ್ ಹಜೇರಿ, ಮುತ್ತು ಕೋರಿ, ಗಣೇಶ ರಾಠೋಡ, ಶಿವನಗೌಡ ಬಿರಾದಾರ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article