ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಎಲ್ಲೆಂದರಲ್ಲಿ ನುಗ್ಗಿದ ಪರಿಣಾಮ 6 ಜನರು ಮೃತಪಟ್ಟು, 49 ಜನರು ಗಾಯಗೊಂಡ ಘಟನೆ ಕುರ್ಲಾ ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುಮಾರು 9.50ರ ಹೊತ್ತಿಗೆ ಈ ಅಪಘಾತ ನಡೆದಿದೆ.
ಚಾಲಕನ ನಿಯಂತ್ರಣ ತಪ್ಪಿ ಹಲವು ಗಾಡಿಗಳಿಗೆ ಗುದ್ದಿ, ಪಾದಚಾರಿಗಳ ಮೇಲೆ ಹರಿದಿದೆ. ನಂತರ ಹೌಸಿಂಗ್ ಸೊಸೈಟಿಯ ಗೋಡೆಗೆ ಡಿಕ್ಕಿಯಾಗಿ ನಿಂತಿದೆ. ಇದರ ಪರಿಣಾಮ 6 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 49 ಜನರು ಗಾಯಗೊಂಡಿದ್ದಾರೆ. ಬಸ್ ಚಾಲಕ ಸಂಜಯ್ ಮೋರೆ ಎಂಬಾತನನ್ನು ಬಂಧಿಸಲಾಗಿದೆ. ಶಿವಂ ಕಶ್ಯಪ್, ಅನಮ್ ಶೇಖ್, ಅಫ್ರೀನ್ ಅಬ್ದುಲ್ ಸಲೀಂ ಶಾ, ಕನ್ನಿಸ್ ಫಾತಿಮಾ ಅನ್ಸಾರಿ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಮಾಹಿತಿ ತಿಳಿದು ಬರಬೇಕಿದೆ.