ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ನಾವಗೆ ಗ್ರಾಮದಲ್ಲಿರುವ ಸ್ನೇಹಂ ಕಾರ್ಖಾನೆಯಲ್ಲಿ(Factory) ಮಂಗಳವಾರ ರಾತ್ರಿ ಬೆಂಕಿ ಅನಾಹುತ ನಡೆದಿದೆ. ಇದು ಇಡೀ ಕಾರ್ಖಾನೆಗೆ ವ್ಯಾಪಿಸಿದ ಪರಿಣಾಮ ಬಧುವಾರ ಮಧ್ಯಾಹ್ನದ ತನಕ ನಿಯಂತ್ರಣಕ್ಕೆ ಬಂದಿಲ್ಲ. ಈ ವೇಳೆ ಕಾರ್ಮಿಕನೊಬ್ಬ ಸುಟ್ಟ ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. 20 ವರ್ಷದ ಯಲ್ಲಪ್ಪ ಸಣ್ಣಗೌಡ ಗುಂಡ್ಯಾಗೋಳ ಮೃತ ಕಾರ್ಮಿಕ(Worker) ಎಂದು ತಿಳಿದು ಬಂದಿದೆ. ಎದೆ ಎತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ ಸುಟ್ಟ ಕರಕಲಾದ ಮಗನ ದೇಹದ ಭಾಗಗಳನ್ನು ಕೈಚೀಲದಲ್ಲಿ ಹಾಕಿಕೊಟ್ಟ ಅಧಿಕಾರಿಗಳ ಅಮಾನವೀತೆಯಿಂದ ಇನ್ನಷ್ಟು ಕುಸಿದು ಹೋಗಿದ್ದಾನೆ.
ದಾರಿಯಲ್ಲಿ ಕೈಚೀಲ ಹಿಡಿದುಕೊಂಡು ಅಳ್ಳುತ್ತಾ ಹೋಗುತ್ತಿದ್ದ ಮೃತ ಯುವಕನ ತಂದೆಯನ್ನು ನೋಡಿದರೆ ಪ್ರತಿಯೊಬ್ಬರಿಗೂ ಹೃದಯತುಂಬಿ ಬಂದಿದೆ. ಜೊತೆಗೆ ಅಧಿಕಾರಿಗಳ ಈ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಪರಿಷತ್ ಸದಸ್ಯ ಸಿ.ಟಿ ರವಿ(C T Ravi) ಅವರು, ಮಾನವೀತೆಯ ಅಂತಃಕರಣ ಇಲ್ಲದ ಕಾಂಗ್ರೆಸ್ ಸರ್ಕಾರ ಎಂದು ಕಿಡಿ ಕಾರಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿ ಜಿಲ್ಲಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಾನವೀಯತೆಯ ಅಂತಃಕರಣ ಇಲ್ಲದ @INCKarnataka ಸರ್ಕಾರ.
ಎದೆ ಎತ್ತರಕ್ಕೆ ಬೆಳೆದ ಮಗನ ದೇಹ ಸುಟ್ಟು ಕರಕಲಾದುದ್ದನ್ನು ಸಹಿಸುಕೊಳ್ಳುವುದೇ ಕಷ್ಟ.
ಅಂತಹದರಲ್ಲಿ ಮಗನ ಅಳಿದುಳಿದ ದೇಹದ ಅವಶೇಷಗಳನ್ನು ಹೆತ್ತ ತಂದೆಯ ಕೈಗೆ "ಕೈ" ಚೀಲದಲ್ಲಿ ಒಪ್ಪಿಸಿ ಮನೆಗೆ ನಡೆಯಿರಿ ಎನ್ನುವುದು ಎಷ್ಟರ ಮಟ್ಟಿಗೆ ಸರಿ..??
ಸಿಎಂ @siddaramaiah ಅವರೆ, ನಾವು… pic.twitter.com/U9biM615bR
— C T Ravi 🇮🇳 ಸಿ ಟಿ ರವಿ (@CTRavi_BJP) August 8, 2024