ಪ್ರಜಾಸ್ತ್ರ ಸುದ್ದಿ
ಮೈಸೂರು(Mysore): ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ನಾವು ಭಾಗವಹಿಸುತ್ತಿಲ್ಲ. ನಾವು ಹಿಂದುಳಿದವರು ಅಲ್ಲ ಎಂದು ಹೇಳಿರುವ ಇನ್ಪೊಸಿಸ್ ನ ನಾರಾಯಣಮೂರ್ತಿ, ಸುಧಾಮೂರ್ತಿ ಅವರ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ, ಇನ್ಪೊಸಿಸ್ ನವರು ಬೃಹಸ್ಪತಿಗಳಾ? ನಾವು ಮಾಡುತ್ತಿರುವುದು ಹಿಂದುಳಿದವರ ಸಮೀಕ್ಷೆಯಲ್ಲ. ಮುಂದೆ ಕೇಂದ್ರ ಜನಗಣತಿ ಮಾಡುತ್ತಾರೆ. ಆಗ ಏನು ಉತ್ತರ ಕೊಡುತ್ತಾರೆ ಎಂದು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದರು.
ಇದು ರಾಜ್ಯ 7 ಕೋಟಿ ಜನರ ಸಾಮಾಜಿಕ, ಶೈಕ್ಷಣಿ, ಆರ್ಥಿಕ ಸಮೀಕ್ಷೆ ಎಂದು ಹೇಳಿದ್ದೇವೆ. ಜಾಹೀರಾತು ಕೊಟ್ಟಿದ್ದೇವೆ. ಗೃಹಲಕ್ಷ್ಮಿ, ಭಾಗ್ಯಲಕ್ಷ್ಮಿ, ಶಕ್ತಿ ಯೋಜನೆಯನ್ನು ಮೇಲ್ವರ್ಗದವರು ಪಡೆದುಕೊಳ್ಳುತ್ತಿವೆ? ನಾರಾಯಣಮೂರ್ತಿ, ಸುಧಾಮೂರ್ತಿ ಅಂಥವರು ಇದನ್ನು ಹಿಂದುಳಿದವರ ಸಮೀಕ್ಷೆ ಅನ್ನೋ ಭಾವನೆ ಹೊಂದಿದ್ದರೆ ಅದು ತಪ್ಪು. ಏನಿದ್ದರೂ ಅದು ಅವರಿಗೆ ಸೇರಿದ್ದು ಎಂದು ಮುಖ್ಯಮಂತ್ರಿ ಹೇಳಿದರು.