ಪ್ರಜಾಸ್ತ್ರ ಸುದ್ದಿ
ಬೆಂಗಳೂರು(Bengaloru): ಹೊಸ ವರ್ಷಕ್ಕೆ ಜನರಿಗೆ ಬೆಲೆ ಏರಿಕೆ ಹೊಡೆತದಿಂದ ಹೊರ ಬರುವ ದಾರಿ ತೋರಬೇಕಾದ ಸರ್ಕಾರ ಸಾರಿಗೆ ಟಿಕೆಟ್ ದರ ಏರಿಕೆ ಮಾಡುವ ಮೂಲಕ ಮತ್ತಷ್ಟು ಸಂಕಷ್ಟಕ್ಕೆ ತಳುತ್ತಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ ದರ ಶೇಕಡ 15ರಷ್ಟು ಏರಿಕೆ ಮಾಡುವ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಗಿದೆ. ನಾಲ್ಕು ನಿಗಮಗಳಿಂದ ಬಸ್ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ ಬಂದಿದ್ದವು ಎಂದು ಹೇಳಲಾಗುತ್ತಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿಗಳಲ್ಲಿ ಶಕ್ತಿ ಯೋಜನೆಯು ಒಂದಾಗಿದೆ. ಈ ಮೂಲಕ ರಾಜ್ಯವ್ಯಾಪಿ ಹೆಣ್ಮಕ್ಕಳಿಗೆ ಉಚಿತ ಸಾರಿಗೆ ಸೇವೆ ನೀಡಲಾಗುತ್ತಿದೆ. ರಾಜಹಂಸ, ಸ್ಪೀಪರ್ ಕೋಚ್, ವೇಗದೂತದಂತಹ ಐಷಾರಾಮಿ ಬಸ್ ಗಳು ಹೊರತು ಪಡಿಸಿ ಸಾಮಾನ್ಯ ಬಸ್ ಗಳಲ್ಲಿ ಹೆಣ್ಮಕ್ಕಳಿಗೆ ಉಚಿತ ಪ್ರಯಾಣ ನೀಡಲಾಗುತ್ತಿದೆ. ಆದರೆ, ಇದೀಗ ನೋಡಿದರೆ ಟಿಕೆಟ್ ದರ ಶೇಕಡ 15ರಷ್ಟು ಏರಿಕೆ ಮಾಡುವ ಮೂಲಕ ಗಂಡ್ಮಕ್ಕಳ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.