ಪ್ರಜಾಸ್ತ್ರ ಸುದ್ದಿ
ತಿರುವನಂತಪುರ(Thiruvananthapuram): ಕಾರು ಹಾಗೂ ಬಸ್ ನಡುವಿನ ಅಪಘಾತದಲ್ಲಿ ಕಳೆದ ತಿಂಗಳು ಮದುವೆಯಾಗಿದ್ದ ಜೋಡಿಯೊಂದು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಭಾನುವಾರ ಮುಂಜಾನೆ ಪುನಲೂರ-ಮುವಾಟ್ಟಪುಳ ರಾಜ್ಯ ಹೆದ್ದಾರಿಯಲ್ಲಿ ಮುಂಜಾನೆ ಸುಮಾರು 5 ಗಂಟೆ ಅಪಘಾತ ನಡೆದಿದೆ. ನಿಖಿಲ್, ಪತ್ನಿ ಅನು ಹಾಗೂ ಇವರಿಬ್ಬರ ತಂದೆಯವರು ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ತೆಲಂಗಾಣದಿಂದ ಶಬರಿಮಲೆ ಯಾತ್ರಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ಮಲೇಷ್ಯಕ್ಕೆ ಹನಿಮೂನ್ ಗೆ ಹೋಗಿದ್ದ ನಿಖಿಲ್ ಹಾಗೂ ಅನು ಊರಿಗೆ ವಾಪಸ್ ಆಗುತ್ತಿದ್ದರು. ಮನೆ ಸೇರಿಲು ಇನ್ನು ಕೇವಲ 7 ಕಿಲೋ ಮೀಟರ್ ದೂರವಿತ್ತು. ಅಷ್ಟರಲ್ಲಿ ಅಪಘಾತ ಸಂಭವಿಸಿದೆ. ನಿಖಿಲ್, ಪತ್ನಿ ಅನು, ನಿಖಿಲ್ ತಂದೆ ಮಥಾಯ್, ಅನು ತಂದೆ ಬಿಜು ಮೃತದುರ್ದೈವಿಗಳು. ಬಿಜು ಕಾರು ಚಲಾಯಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.