ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಕ್ರಾಸ್ ಹತ್ತಿರ ಶನಿವಾರ ರಾತ್ರಿ ನಡೆದಿದೆ. ಅಪಘಾತದ ತೀವ್ರತೆಗೆ ಬೆಂಕಿ ಹೊತ್ತಿಕೊಂಡಿದ್ದು, ಸವಾರರು ಅದರಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.
ತಾಲೂಕಿನ ಸಿರಗಾಪುರ ಗ್ರಾಮದ ಆಕಾಶ್ ಧನವಂತ(19) ಹಾಗೂ ಸುಶೀಲ್ ಮಲ್ಲಿಕಾರ್ಜುನ್(28) ಮೃತ ದುರ್ದೈವಿಗಳು. ಹೈದರಾಬಾದ್ ನಿಂದ ಕಲಬುರಗಿಗೆ ಹೊರಟಿದ್ದ ಕಾರು ಹಾಗೂ ಗ್ರಾಮದಿಂದ ಮಹಾಗಾಂವ್ ಕ್ರಾಸ್ ಕಡೆ ಹೊರಟಿದ್ದ ಬೈಕ್ ನಡುವೆ ಭೀಕರ ಅಪಘಾತವಾಗಿದೆ.




