ಪ್ರಜಾಸ್ತ್ರ ಸುದ್ದಿ
ಧಾರವಾಡ(Dharwad): ಮುಂದೆ ಹೊರಟಿದ್ದ ವಾಹನವೊಂದಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪತಿ ಮೃತಪಟ್ಟಿದ್ದು, ಪತ್ನಿ ಹಾಗೂ ಮಗಳು ಗಾಯಗೊಂಡ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಹತ್ತಿರದ ಮುಲ್ಲಾ ದಾಬಾ ಬಳಿ ನಡೆದಿದೆ. ಬ್ಯಾಂಕ್ ಮ್ಯಾನೇಜರ್ ಮಧ್ಯಪ್ರದೇಶ ಮೂಲದ ರಾಹುಲ್ ಶುಕ್ಲಾ(40) ಮೃತ ದುರ್ದೈವಿ. ಪತ್ನಿ ಶ್ರೇಯಾ(35), ಮಗಳು ಕಿಯಾನಾ(03) ಗಾಯಗೊಂಡಿದ್ದಾರೆ.
ಕುಟುಂಬ ಸಮೇತ ಧಾರವಾಡದಿಂದ ಬೆಳಗಾವಿಗೆ ಕಾರಿನಲ್ಲಿ ಹೊರಟಿದ್ದ ರಾಹುಲ್, ನಿಯಂತ್ರಣ ತಪ್ಪಿ ಮುಂದಿನ ವಾಹನಕ್ಕೆ ಡಿಕ್ಕಿ ಹೊಡೆದಿದೆಯಂತೆ. ಇದರ ಪರಿಣಾಮ ಕಾರು ಚಲಾಯಿಸುತ್ತಿದ್ದ ರಾಹುಲ್ ಶುಕ್ಲಾ ಮೃತಪಟ್ಟಿದ್ದಾರೆ. ಗಾಯಾಳು ಪತ್ನಿ, ಮಗಳನ್ನು ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.