ಕುವೈತ್ ಅಗ್ನಿ ಅನಾಹುತ: ಭಾರತಕ್ಕೆ ಬಂದ 45 ಮೃತದೇಹ

99

ಪ್ರಜಾಸ್ತ್ರ ಸುದ್ದಿ

ಕೊಚ್ಚಿ: ಕಳೆದ ಎರಡು ದಿನಗಳ ಹಿಂದೆ ಕುವೈತ್ ವಸತಿ ಕಟ್ಟಡದಲ್ಲಿ ನಡೆದ ಬೆಂಕಿ ಅನಾಹುತದಲ್ಲಿ 49 ಜನರು ಪ್ರಾಣ ಕಳೆದುಕೊಂಡಿದ್ದಾರೆ. 50 ಮಂದಿ ಗಾಯಗೊಂಡಿದ್ದಾರೆ. ಮೃತರಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶುಕ್ರವಾರ ಕೇರಳದ ಕೊಚ್ಚಿ ವಿಮಾನ ನಿಲ್ದಾಣಕ್ಕೆ 45 ಮೃತದೇಹಗಳು ಬಂದಿವೆ.

45 ಮೃತ ಭಾರತೀಯರಲ್ಲಿ 23 ಮಂದಿ ಕೇರಳದವರಾಗಿದ್ದಾರೆ. 7 ಮಂದಿ ತಮಿಳುನಾಡಿನವರು, ಒಬ್ಬರು ಕರ್ನಾಟಕದವರಾಗಿದ್ದಾರೆ. ಇನ್ನು ಇತರೆ ಮೃತರಲ್ಲಿ ನೇಪಾಳ, ಪಾಕಿಸ್ಥಾನ್, ಈಜಿಫ್ಟ್, ಫಿಲಿಪ್ಪೀನ್ಸ್ ಪ್ರಜೆಗಳಿದ್ದಾರೆ.

ವಾಯುಪಡೆಯ ವಿಮಾನದ ಮೂಲಕ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೃತದೇಹಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
error: Content is protected !!