ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ಜಿಲ್ಲೆಯ ಮಚ್ಚೆ ಗ್ರಾಮದಲ್ಲಿ ಭಾನುವಾರ ಅಖಂಡ ಹಿಂದೂ ಸಮ್ಮೇಳನದ ಅಂಗವಾಗಿ ಶೋಭಾಯಾತ್ರೆ ನಡೆಸಲಾಗಿದೆ. ಈ ವೇಳೆ ಮಹಾರಾಷ್ಟ್ರದ ಹಿಂದೂ ನಾಯಕಿ ಹರ್ಷಿತಾ ಠಾಕೂರ್ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಅನ್ನೋ ಆರೋಪದ ಮೇರೆಗೆ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಮೆರವಣಿಗೆ ವೇಳೆ ತೆರದ ವಾಹನದಲ್ಲಿ ಮಾತನಾಡುತ್ತಿದ್ದ ಹರ್ಷಿತಾ ಠಾಕೂರ್, ಅನ್ಸಾರಿ ದರ್ಗಾ ಬಳಿ ಬಂದಾಗ ವಾಹನ ನಿಲ್ಲಿಸಿ ದರ್ಗಾದ ಕಡೆಗೆ ಬಾಣ ಬಿಟ್ಟಂತೆ ಕೈ ಸನ್ನೆ ಮಾಡಿ ತೋರಿಸಿದ್ದಾರೆ. ಅಲ್ಲದೆ ಧಾರ್ಮಿಕ ಭಾವನೆ ಕೆರಳಿಸುವ ಭಾಷಣ ಮಾಡಿದ್ದಾರೆ ಎಂದು ಅಬ್ದುಲ್ ಖಾದರ್ ಮುಜಾವರ್ ಎಂಬುವರು ದೂರು ನೀಡಿದ್ದಾರೆ. ಹೀಗಾಗಿ ಹರ್ಷಿತಾ ಠಾಕೂರ್ ಸೇರಿದಂತೆ ಸಮಾವೇಶದ ಆಯೋಜಕಾರದ ಬೆಳಗಾವಿಯ ಸುಪ್ರೀತ್ ಸಿಂಪಿ, ಶ್ರೀಕಾಂತ್ ಕಾಂಬಳೆ, ಶಿವಾಜಿ ಶಹಾಪೂರಕರ, ಕಲ್ಲಪ್ಪ, ಗಂಗಾರಾಮ ತಾರಿಹಾಳ, ಬೆಟ್ಟಪ್ಪ ತಾರಿಹಾಳ ಎಂಬುವರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




