ಪ್ರಜಾಸ್ತ್ರ ಸುದ್ದಿ
ಹೈದರಾಬಾದ್: ತಿರುಪತಿ ತಿರುಮಲ ವೆಂಕಟೇಶ್ವರ ಸನ್ನಿಧಾನದಲ್ಲಿ ವೈಎಸ್ಆರ್(YSR Congress) ಕಾಂಗ್ರೆಸ್ ಶಾಸಕ ಡುವ್ವಾಡ್(Duvvada Srinivas) ಶ್ರೀನಿವಾಸ್ ಅವರ ಗೆಳತಿ ಮಾಧುರಿ ದಿವ್ವಾಳ್ ರೀಲ್ಸ್ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿದೆ. ವಿಜಯ ದಶಮಿ ಪ್ರಯುಕ್ತ ಶಾಸಕ ಡುವ್ವಾಡ್ ಶ್ರೀನಿವಾಸ್ ಜೊತೆಗೆ ಮಾಧುರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ನಿಯಮಗಳನ್ನು ಮೀರಿದ್ದಾರೆ ಎಂದು ಆರೋಪಿಸಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಮಾತನಾಡಿರುವ ಮಾಧುರಿ, ಉಪಮುಖ್ಯಮಂತ್ರಿ ಪವನ್(Pawan Kalyan) ಕಲ್ಯಾಣ್ ಬಗ್ಗೆ ನಾನು ಪೋಸ್ಟ್ ಹಾಕಿರುವುದಕ್ಕೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೋ ಕ್ರಿಯೇಟರ್ ಆಗಿರುವ ಮಾಧುರಿ ದಿವ್ವಾಳ್ ಜೊತೆಗೆ ಶಾಸಕ ಡುವ್ವಾಡ್ ಶ್ರೀನಿವಾಸ್ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.