ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಸಂಘಟನೆಗಳ ಹೆಸರಿನಲ್ಲಿ ಕೆಲವರು ಬ್ಲ್ಯಾಕ್ ಮಾಡುವ ಕೆಲಸಗಳು ಮಾಡುತ್ತಿರುವುದು ನಿರಂತರವಾಗಿ ಬೆಳಕಿಗೆ ಬರುತ್ತಿವೆ. ಅಂತವರ ಸಾಲಿನಲ್ಲಿ ಇದೀಗ ರೈತ ಹೋರಾಟಗಾರ್ತಿ ಎಂದು ಹೇಳಿಕೊಂಡು ಓಡಾಡುವ ಮಂಜುಳಾ ಪೂಜಾರ ಎನ್ನುವ ಮಹಿಳೆ ವಿರುದ್ಧ ದೂರು ದಾಖಲಾಗಿದೆ. ಪ್ರಥಮ ದರ್ಜೆ ಗುತ್ತಿಗೆದಾರರೊಬ್ಬರು ಹುಬ್ಬಳ್ಳಿಯ ಗೋಕಲ್ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಕಲಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ಇದರಿಂದ ಹೆದರಿ 20 ಲಕ್ಷ ರೂಪಾಯಿ ನೀಡಲಾಗಿದೆ. ಈಗ ಮತ್ತೆ 50 ಲಕ್ಷ ರೂಪಾಯಿ ಕೊಡಬೇಕು ಎಂದು ಬ್ಲ್ಯಾಕ್ ಮಾಡಿದಾಗ ನನ್ನಿಂದ ಸಾಧ್ಯವಿಲ್ಲವೆಂದು ಹೇಳಿ ದೂರು ದಾಖಲಿಸಿದ್ದಾರೆ ಎನ್ನುತ್ತಾರೆ. 2022ರಲ್ಲಿ 20 ಲಕ್ಷ ರೂಪಾಯಿ ಸುಲಿಗೆ ಘಟನೆ ನಡೆದಿದೆಯಂತೆ. ಹತ್ತಿ ಬೀಜದ ವಿಚಾರದಲ್ಲಿ ಪರಿಚಯವಾದ ಮಂಜುಳಾ ಪೂಜಾರ ಫೋನ್ ಮಾಡಿ ಮಾತನಾಡುವುದು ಮಾಡಿದ್ದು, ನಕಲಿ ವಿಡಿಯೋ ಇಟ್ಟುಕೊಂಡು ಹೆದರಿಸಿದ್ದಾರೆ ಎನ್ನುತ್ತಿದ್ದಾರೆ.
ಈ ಘಟನೆ ಸಂಬಂಧ ಮಂಜುಳಾ ಪತಿ ಎಂದು ಹೇಳಲಾಗುತ್ತಿರುವ ಜಗದೀಶ್ ಸಣ್ಣಕ್ಕಿ ಎ1, ಹನುಮಂತಪ್ಪ ಬಂಡಿವಡ್ಡರ್ ಎ2, ಮಂಜುಳಾ ಪೂಜಾರ ಎ3 ಹಾಗೂ ಸಿದ್ದಪ್ಪ ಹೊಸಮನಿ ಎ4 ಆರೋಪಿಯಾಗಿದ್ದಾರೆ. ಮನೆಯೊಂದರಲ್ಲಿ ಕಂತೆ ಕಂತೆ ಹಣವನ್ನು ಟೇಬಲ್ ಮೇಲೆ ಇಟ್ಟುಕೊಂಡು ಎಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಏನಾಗುತ್ತೋ ಕಾದು ನೋಡಬೇಕು.