‘ಮೇಕೆದಾಟು ಯೋಜನೆಯಿಂದ ಕಾವೇರಿ ಸಮಸ್ಯೆ ಇತ್ಯರ್ಥ’

244

ಪ್ರಜಾಸ್ತ್ರ ಸುದ್ದಿ

ಮೈಸೂರು: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವ ಸಂಬಂಧ ರಾಜ್ಯದಲ್ಲಿ ಹೋರಾಟಗಳು ನಡೆದಿವೆ. ಈ ಕುರಿತು ನಗರದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೇಕೆದಾಟು ಯೋಜನೆ ಸಮಸ್ಯೆ ಇತ್ಯರ್ಥದಿಂದ ಕಾವೇರಿ ಸಮಸ್ಯೆ ಬಗೆಹರಿಸಬಹುದು ಎಂದರು.

ಮೇಕೆದಾಟು ಆಣೆಕಟ್ಟು ನಿರ್ಮಿಸಿದರೆ 67 ಟಿಎಂಸಿ ನೀರನ್ನು ಸಂಗ್ರಹಿಸಬಹುದು. ಮಳೆ ಕೊರತೆ ಸಂದರ್ಭದಲ್ಲಿ ಎರಡೂ ರಾಜ್ಯದವರು ಆ ನೀರನ್ನು ಬಳಸಬಹುದು. ಇನ್ನು ಜನರ ಹಿತಕ್ಕಾಗಿ ಪ್ರತಿಭಟನೆ, ಹೋರಾಟ ಮಾಡಲಿ. ನಾವು ಯಾರಿಗೂ ಅಡ್ಡಿ ಪಡಿಸುವುದಿಲ್ಲ ಎಂದರು.

ಕಾವೇರಿ ನೀರಿನ ವಿಚಾರವಾಗಿ ಬಿಜೆಪಿಯವರು ಪ್ರಧಾನಿಯೊಂದಿಗೆ ಮಾತನಾಡಿಲಿ. ದೇವೇಗೌಡರು ಪ್ರಧಾನಿ ಪತ್ರ ಬರೆದಿರುವುದನ್ನು ಸ್ವಾಗತಿಸುತ್ತೇನೆ. ಆದರೆ, ಪತ್ರದಲ್ಲಿ ಕಾವೇರಿ ವಿಚಾರದಲ್ಲಿ ನಾವು ವಿಫಲರಾಗಿದ್ದೇವೆ ಎನ್ನುವುದು ಒಪ್ಪಿಕೊಳ್ಳಲ್ಲ. ನಾಡಿನ ಹಿತಕ್ಕಾಗಿ ನಾವು ಸದಾ ಬದ್ಧರಾಗಿದ್ದೇವೆ. ಬಿಜೆಪಿಯೊಂದಿಗೆ ಅವರಿಗೆ ಹೊಸದಾಗಿ ಪ್ರೇಮವಾಗಿದೆ. ಸಮಸ್ಯೆ ಬಗೆಹಿರುಸವ ಕೆಲಸ ಅವರೂ ಮಾಡಲಿ ಎಂದರು.
error: Content is protected !!