ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಹಿಂದೂ ಹಾಗೂ ಮುಸ್ಲಿಂ ಬಂಧುಗಳು ಮುಂಬರುವ ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದು ಕೊಳ್ಳಬೇಕೆಂದು ಎಂದು ಸಿಪಿಐ ನಾನಾಗೌಡ ಪೋಲಿಸ್ ಪಾಟೀಲ ಹೇಳಿದರು. ಮಂಗಳವಾರ ಸಿಂದಗಿ ಪೋಲಿಸ್ ಠಾಣೆ ಆವರಣದಲ್ಲಿ ನಡೆದ ಹೋಳಿ ಹುಣ್ಣಿಮೆ ಹಾಗೂ ರಂಜಾನ್ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ವೇಳೆ ಮಾತನಾಡಿದ ಪಿಎಸ್ಐ ಆರೀಫ್ ಮುಶಾಪುರಿ, ತಾಲೂಕಿನಲ್ಲಿ ಮೊದಲಿನಿಂದಲೂ ಹಿಂದೂ ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತ ನೆಲೆಸಿದ್ದು ಸಂತಸದ ವಿಷಯವಾಗಿದೆ. ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ. ಈಗ ದ್ವಿತೀಯ ಪಿಯುಸಿ ಪರೀಕ್ಷೆ ಇರುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಹಬ್ಬ ಆಚರಿಸಬೇಕು. ಯಾರಾದರೂ ಕಾನೂನನ್ನು ಉಲ್ಲಂಘಿಸಿದ್ದು ಕಂಡುಬಂದಲ್ಲಿ ಕಾನೂನು ರೀತಿಯಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು. ಈ ವೇಳೆ ಇರ್ಫಾನ್ ಬಾಗವಾನ, ಪ್ರವೀಣ ಹಾಲಹಳ್ಳಿ, ರಾಕೇಶ ಕಾಂಬಳೆ, ರಜತ್ ತಾಂಬೆ, ಫೈಜಾನ್ ಮಾಣಗೂಂಕರ್, ಬಸವರಾಜ ರಂಜಣಗಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.