ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳೇ ಅಧ್ಯಕ್ಷತೆ, ಮುಖ್ಯ ಅತಿಥಿ, ಅತಿಥಿ ಸ್ಥಾನ ಅಲಂಕರಿಸಿದ್ದು ವಿಶೇಷವಾಗಿತ್ತು. ಶಿಕ್ಷಕರು ಪ್ರೇಕ್ಷಕರಾಗಿದ್ದರು. ಈ ಮೂಲಕ ವೇದಿಕೆ ಮೇಲೆ ಚಿಣ್ಣರು ಕುಳಿತುಕೊಂಡು ಹೊಸ ಅನುಭವ ಪಡೆದುಕೊಂಡರು.
ಮಕ್ಕಳಿಗಾಗಿ ಗಾಯನ, ಭಾಷಣ, ಆಟೋಟ, ಮನರಂಜನೆ ಹಾಗೂ ಬೌದ್ಧಿಕ ಚಟುವಟಿಕೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಂಡಿತ ಜವಹರಲಾಲ ನೇಹರೂರವರ ಜೀವನ ಸಾಧನೆ ಹಾಗೂ ಮಕ್ಕಳ ದಿನಾಚರಣೆಯ ಮಹತ್ವ, ಮಕ್ಕಳ ಹಕ್ಕುಗಳು ಹಾಗೂ ಅವುಗಳ ಸಮರ್ಪಕ ಅನುಷ್ಟಾನದ ಕುರಿತು ವಿದ್ಯಾರ್ಥಿನಿಯರಾದ ವೈಷ್ಣವಿ, ಸಹನಾ ಅಂಬಿಗೇರ, ಶ್ರೀರಕ್ಷಾ, ಈಶ್ವರಿ ಭೂಶೆಟ್ಟಿ ಭಾಷಣ ಮಾಡಿದರು.
ಸೌಮ್ಯಾ, ಭುವನೇಶ್ವರಿ, ಅಶ್ವಿನಿ, ಶ್ರಾವಣಿ ಹಿರೋಳ್ಳಿ, ಸೃಷ್ಟಿ ಅಂಬಿಗೇರ, ಶ್ರಾವಣಿ ಸ್ಥಾವರಮಠ, ಅನುಶ್ರೀ ಗಾಣಿಗೇರ, ಸನ್ನಿಧಿ ಹೂಗಾರ, ಭಾರ್ಗವಿ ಅಖಂಡಪ್ಪಗೋಳ, ಶಂಕರ ಗಿರಣಿ, ಸಂಗಮೇಶ ಕುಂಬಾರ, ಅಸಾದ ಕನ್ನೊಳ್ಳಿ, ಸಂಗಮೇಶ ಬಡಾನೂರ, ಪ್ರದೀಪ ಸೇರಿ ಮುಂತಾದ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಕುರಿತ ಹಾಡು, ನಾಟಕ ಪ್ರದರ್ಶಿಸಿದರು. ವಿದ್ಯಾರ್ಥಿನಿ ಅರ್ಪಿತ ಕಾಂಬ್ಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅರುಣ ಸುತಾರ ಮುಖ್ಯ ಅತಿಥಿ ಸ್ಥಾನ, ವೈಸಿರಿ, ಚೈತನ್ಯ, ಐಶ್ವರ್ಯ, ಸಾರ್ಥಕ ಅತಿಥಿ ಸ್ಥಾನ ಅಲಂಕರಿಸಿದ್ದರು. ಪ್ರತಿಭಾ ಹಿರೇಮಠ ಕಾರ್ಯಕ್ರಮ ನಿರೂಪಸಿದರು. ವಿಕಾಸ ಸ್ವಾಗತಿಸಿದರು, ಈಶ್ವರ ವಡ್ಡೋಡಗಿ ವಂದನಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ, ಸಿಬ್ಬಂದಿ ಭಾಗವಹಿಸಿದ್ದರು.