ಪ್ರಜಾಸ್ತ್ರ ಸುದ್ದಿ(Photo-@PTI)
ನವದೆಹಲಿ(New Delhi): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿತ್ತು. ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾಡ್ ಡೆರ್ ಲೇಯೆನ್, ಯುರೋಪಿಯನ್ ಕೌನ್ಸಲ್ ಅಧ್ಯಕ್ಷ ಆಂಟೋನಿಯಾ ಕೋಸ್ಟಾ ಭಾಗವಹಿಸಿದ್ದರು.
ಇದೆ ವೇಳೆ ಸ್ತಬ್ಧಚಿತ್ರ ಮೆರವಣಿಗೆ, ಪಥಸಂಚಲನ ನಡೆಯಿತು. ಸೇನೆಯ ಎಂಐ-17 1ವಿ ಹೆಲಿಕಾಪ್ಟರ್ ಗಳು ಕರ್ತವ್ಯ ಪಥದ ಮೇಲೆ ಹೂ ಮಳೆ ಸುರಿಸಿದವು. ಈ ವೇಳೆ ರಕ್ಷಣಾ ಶಕ್ತಿಯ ಅನಾವರಣ ಸಹ ನಡೆಯಿತು. ಡಿಆರ್ ಡಿಒ ಸಿದ್ಧಪಡಿಸಿರುವ ಹೈಪರ್ ಸಾನಿಕ್ ಕ್ಷಿಪಣಿಗಳು ಇದೆ ಮೊದಲ ಬಾರಿಗೆ ಪ್ರದರ್ಶನಗೊಂಡವು. ಬ್ರಹ್ಮೋಸ್ ಕ್ಷಿಪಣಿಯ ಪ್ರದರ್ಶನ ಸಹ ನಡೆಯಿತು.




