ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindagi): ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು(brahma sri narayana guru) ಹಾಗೂ ಮಾಜಿ ಮುಖ್ಯಮಂತ್ರಿ ದಿ.ದೇವರಾಜ(devaraj arasu) ಅರಸು ಅವರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು. ಸಾಮಾಜದಲ್ಲಿನ ಜಾತಿ, ಅಸಮಾನತೆ, ಮೇಲು-ಕೀಳು ಎನ್ನುವುದನ್ನು ತೊಡೆದು ಹಾಕುವ ಸಲುವಾಗಿಯೇ ತಮ್ಮ ಜೀವನವನ್ನು ಮಡುಪಾಗಿಟ್ಟಿದ್ದ ನಾರಾಯಣ ಗುರುಗಳು ಹಾಗೂ ಬಡವರ, ದೀನ ದಲಿತರ ಅಭಿವೃದ್ಧಿಗಾಗಿ ಹಲವಾರು ಜನಪರ ಯೋಜನೆಗಳನ್ನು ತಂದ ಮಾಜಿ ಸಿಎಂ ದಿ.ದೇವರಾಜ ಅರಸು ಅವರ ಫೋಟೋಗಳಿಗೆ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹಾಗೂ ಸಮಾಜದ ಮುಖಂಡರು ಪುಷ್ಪನಮನ ಸಲ್ಲಿಸಿದರು.
ಒಬ್ಬರು ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿದವರು. ಮತ್ತೊಬ್ಬರು ಜನಪರ ಕಾರ್ಯದ ಮೂಲಕ ರಾಜಕಾರಣಿ ಅಂದರೆ ಹೇಗಿರಬೇಕು ಅನ್ನೋದನ್ನು ತೋರಿಸಿಕೊಟ್ಟವರು ಎಂದು ಹೇಳಲಾಯಿತು. ಈ ಇಬ್ಬರು ಮಹನೀಯರ ಜನ್ಮ ದಿನವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ವೇಳೆ ಸಮಾಜದ ಮುಖಂಡರಾದ ಬಸವರಾಜ ಡಿ.ಈಳಗೇರ, ತಮ್ಮಣ್ಣ ವಿ.ಈಳಗೇರ, ಸಚಿನಕುಮಾರ ಬಿ.ಈಳಗೇರ, ನರಯ್ಯ ಎನ್.ಈಳಗೇರ, ಕಪಿಲ ತ.ಈಳಗೇರ, ಅಶೋ ಬಿ.ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.