ಪ್ರಜಾಸ್ತ್ರ ಸುದ್ದಿ
ಸಿಂದಗಿ(Sindgi): ಪಟ್ಟಣದಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಸಂಭ್ರಮ ಕಾರ್ಯಕ್ರಮದ ಅಡಿಯಲ್ಲಿ ‘ಪೌಷ್ಟಿಕತೆ, ಆರೋಗ್ಯ ಮತ್ತು ಶುಚಿತ್ವ’ ವಿಷಯದ ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವಿಷಯದ ಕುರಿತು ತಾಲೂಕು ಸಾರ್ವಜನಿಕ ಆಸ್ಪತ್ರೆ ಪ್ರಯೋಗಾಲಯದ ಮುಖ್ಯಅಧಿಕಾರಿ ರಾಜಶೇಖರ ನರಗೋದಿ ಅವರು, ಪೌಷ್ಟಿಕತೆ ಆರೋಗ್ಯ ಶುಚಿತ್ವದ ಕುರಿತು ಮಕ್ಕಳಿಗೆ ಮನಮುಟ್ಟುವಂತೆ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷರಾದ ಕುಸುಮ ರಮೇಶ ಯಾಳಗಿ ಅವರು ಆರೋಗ್ಯದ ಕುರಿತು ಮಾತನಾಡಿದರು. ಅಭಿನಯ, ಭಾಷಣ, ಆಹಾರ ಮತ್ತು ಪೌಷ್ಟಿಕತೆಯ ಕುರಿತು ಮಕ್ಕಳು ಪ್ರದರ್ಶನ ನೀಡಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳಾದ ಈಶ್ವರಿ, ಸೃಷ್ಟಿ, ಭುವನ ಭೂತಿ, ಕಾರ್ತಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳಾದ ಅರ್ಪಿತ, ಪೂರ್ಣಿಮಾ, ಸಂಗಮೇಶ, ಶಂಕರ, ಈಶ್ವರ, ಹರೀಶ ಪೌಷ್ಟಿಕಾಂಶಗಳಿಗೆ ಸಂಬಂಧಿಸಿದ ಕಥೆಗಳನ್ನು ವಾಚಿಸಿದರು. ರವಿಕುಮಾರ, ಮಲ್ಲಿಕಾರ್ಜುನ, ಭಗವಂತ, ಮಲ್ಕಪ್ಪ, ಪೌಷ್ಟಿಕಾಂಶದ ಗೀತೆಯನ್ನು ಹಾಡಿದರು. ಶಿಕ್ಷಕಿ ಸಕ್ಕುಬಾಯಿ ಡಾಂಗಿ ಸ್ವಾಗತಿಸಿದರು. ಶಿಕ್ಷಕಿ ರೂಪಾ ಪ್ರತಿಜ್ಞಾವಿಧಿ ಭೋಧಿಸಿದರು ಶಿಕ್ಷಕ ವಿಕಾಸ ನಿರೂಪಿಸಿದರು. ಶಿಕ್ಷಕಿ ದೀಕ್ಷಾ ವಂದಿಸಿದರು. ಶಿಕ್ಷಕಿಯರಾದ ಪ್ರಗತಿ, ಲಕ್ಷ್ಮೀ ಸೇರಿದಂತೆ ವಿದ್ಯಾರ್ಥಿಗಳು ಈ ವೇಳೆ ಭಾಗವಹಿಸಿದ್ದರು.