Ad imageAd image

ರಸಗೊಬ್ಬರ ಸಬ್ಸಿಡಿ ಶೇ.11ಕ್ಕೆ ಏರಿಸಿದ ಕೇಂದ್ರ ಸರ್ಕಾರ

Nagesh Talawar
ರಸಗೊಬ್ಬರ ಸಬ್ಸಿಡಿ ಶೇ.11ಕ್ಕೆ ಏರಿಸಿದ ಕೇಂದ್ರ ಸರ್ಕಾರ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ನವದೆಹಲಿ(New Delhi): ಇರಾನ್, ಅಮೆರಿಕಾ, ಇಸ್ರೇಲ್ ಯುದ್ಧದಿಂದಾಗಿ ರಸಗೊಬ್ಬರಗಳ ಬೆಲೆ ಏರಿಕೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಸಬ್ಸಿಡಿಯನ್ನು ಶೇಕಡ 11ಕ್ಕೆ ಹೆಚ್ಚಿಸಿದೆ. ಈ ಮೂಲಕ ಕೃಷ ವಲಯವನ್ನು ರಕ್ಷಿಸುವುದಾಗಿದೆ ಎಂದು ಹೇಳಿದೆ. ಈ ತಿಂಗಳಿಂದ ಪ್ರಾರಂಭವಾಗುವ ಬೇಸಿಗೆ ಬೆಳೆಗಳು ಸೇರಿದಂತೆ 6 ತಿಂಗಳ ಅವಧಿಗೆ ಇದು ಅನ್ವಯವಾಗಲಿದೆ.

ರಸಗೊಬ್ಬರಗಳಿಗೆ 41,532 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಭಾರತದಲ್ಲಿ ಶೇಕಡ 45ಕ್ಕೂ ಹೆಚ್ಚು ಜನರು ಜೀವನೋಪಯಕ್ಕಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಇದು ವಿಶ್ವದಲ್ಲಿ ಅತಿ ಹೆಚ್ಚಾಗಿದೆ. ಪಶ್ಚಿಮ ಏಷ್ಯ ಸಂಘರ್ಷದಿಂದ ಜಾಗತಿಕ ಆಹಾರ ಭದ್ರತೆಗೆ ಬೆಲೆ ಏರಿಕೆ ಹಾಗೂ ಕೊರತೆಯ ಮೂಲಕ ಹೊಡೆತ ಬಿದ್ದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

WhatsApp Group Join Now
Telegram Group Join Now
Share This Article