ಪ್ರಜಾಸ್ತ್ರ ಸುದ್ದಿ
ಸೌಥ್ ಸಿನಿ ದುನಿಯಾದಲ್ಲಿ ಒಂದು ಕಾಲದಲ್ಲಿ ಹಾಟ್ ನಟಿಯಾಗಿ ಮೆರದವರಲ್ಲಿ ಸಿಲ್ಕ್ ಸ್ಮಿತಾ ಒಬ್ಬರು. ಇಂದಿನ ಐಟಂ ಸಾಂಗ್ ಗಳಿಗೆ ನಾಯಕ ನಟಿಯರೆ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, 80, 90ರ ದಶಕದಲ್ಲಿ ಐಟಂ ಸಾಂಗ್ ಗಳಿಗೆ ಹೆಜ್ಜೆ ಹಾಕುವ ನಟಿಯರೇ ಬೇರೆಯಿದ್ದರು. ಅದರಲ್ಲಿ ಟಾಪ್ ನಲ್ಲಿ ಇದ್ದವರು ಸಿಲ್ಕ್ ಸ್ಮಿತಾ. ವಿಲಯಕ್ಷ್ಮಿ ವಡ್ಲಪಾಟಿ ಹೆಸರಿನ ನಟಿ ಮುಂದೆ ಸಿಲ್ಕ್ ಸ್ಮಿತಾ ಆಗಿ ಬದಲಾಗಿ ಉತ್ತುಂಗದ ಸ್ಥಾನ ತಲುಪಿದ್ದು ಇತಿಹಾಸ. ಭಾರತದ ಹಲವು ಭಾಷೆಗಳಲ್ಲಿ ನಟಿಸಿದರು. ಆರಂಭದಲ್ಲಿ ಐಟಂ ಸಾಂಗ್ ಗಳಿಗೆ ಕುಣಿದ ನಟಿ ಮುಂದೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು.
ಇಂತಹ ನಟಿಯ ಜೀವನ ಕುರಿತು ಬಾಲಿವುಡ್ ನಲ್ಲಿ 2011ರಲ್ಲಿ ದಿ ಡರ್ಟಿ ಫಿಕ್ಚರ್ ಹೆಸರಿನ ಸಿನಿಮಾ ಬಂತು. ನಟಿ ವಿದ್ಯಾ ಬಾಲನ್ ಸಿಲ್ಕ್ ಸ್ಮಿತಾ ಪಾತ್ರ ಮಾಡಿದರು. ಇದರ ಹಲವು ಅಪಸ್ವರಗಳು ಸಹ ಕೇಳಿ ಬಂದವು. ಈಗ ತಮಿಳಿನಲ್ಲಿ ಸಿಲ್ಕ್ ಸ್ಮಿತಾ ಬಯೋಪಿಕ್ ಬರಲು ಸಿದ್ಧವಾಗುತ್ತಿದೆ. ನಿನ್ನೆ ಆಕೆಯ ಹುಟ್ಟು ಹಬ್ಬದ ಹಿನ್ನಲೆಯಲ್ಲಿ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಆಗಿದೆ. ಸಿಲ್ಕ್ ಸ್ಮಿತಾ-ಕ್ವೀನ್ ಆಫ್ ದಿ ಸೌತ್(Silk Smitha-Queen of the South) ಎಂದು ಹೆಸರು ಇಡಲಾಗಿದೆ. ನಟಿ ಚಂದ್ರಿಕಾ ರವಿ(Chandrika Ravi) ಸಿಲ್ಕ್ ಸ್ಮಿತಾ ಪಾತ್ರಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಯರಾಮ್ ಶಂಕರನ್ ನಿರ್ದೇಶನ ಮಾಡುತ್ತಿದ್ದಾರೆ. ವಿಜಯ್ ಅಮೃತರಾಜ್ ನಿರ್ಮಾಣ ಮಾಡುತ್ತಿದ್ದು, 2025ರ ಆರಂಭದಿಂದ ಶೂಟಿಂಗ್ ನಡೆಯಲಿದೆಯಂತೆ.