Ad imageAd image

ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿಕೆ, 39 ಜನರ ವಿರುದ್ಧ ಚಾರ್ಜ್ ಶೀಟ್

Nagesh Talawar
ಪ್ರಜ್ವಲ್ ಅಶ್ಲೀಲ ವಿಡಿಯೋ ಹಂಚಿಕೆ, 39 ಜನರ ವಿರುದ್ಧ ಚಾರ್ಜ್ ಶೀಟ್
Former Lok Sabha MP Prajwal Revanna [FILE]
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಬೆಂಗಳೂರು(Bengaloru): ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣದ 39 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎಸ್ಐಟಿ ತಂಡ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ 13,712 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಈ ಪ್ರಕರಣದಲ್ಲಿ 52 ಆರೋಪಿಗಳ ಹೆಸರು ದೋಷಾರೋಪ ಪಟ್ಟಿಯಲ್ಲಿದೆ. ಅದರಲ್ಲಿ 39 ಆರೋಪಿಗಳ ವಿರುದ್ಧ ಆರೋಪ ದೃಢಪಡಿಸಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ವಿಚಾರಣವೆ ವೇಳೆ 277 ಜನರ ಸಾಕ್ಷಿಗಳನ್ನು ಪಡೆಯಲಾಗಿದೆ. ಅಶ್ಲೀಲ ವಿಡಿಯೋ ಹಂಚಿಕೆಗಾಗಿ 70 ಪೆನ್ ಡ್ರೈವ್ ಗಳನ್ನು ಹಾಸನದಲ್ಲಿಯೇ ಖರೀದಿಸಲಾಗಿತ್ತು ಅನ್ನೋ ಮಾಹಿತಿ ಸಿಕ್ಕಿದೆ.

ನವೀನ್ ಪ್ರಮುಖ ಆರೋಪಿ. ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ 2ನೇ ಆರೋಪಿ. ಬಿಜೆಪಿ ಮುಖಂಡ ದೇವರಾಜೇಗೌಡ 8ನೇ ಆರೋಪಿಯಾಗಿದ್ದಾರೆ. ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದವರು ಅನೇಕರಿದ್ದಾರೆ. ಇನ್ನು ಕೆಲವರನ್ನು ಹೆಸರು ಕೈ ಬಿಟ್ಟಿದ್ದಕ್ಕೆ ದೂರುದಾರ ಪೂರ್ಣಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Share This Article