Ad imageAd image

ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

Nagesh Talawar
ಚೌಡಯ್ಯ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಗದಗ(Gadaga): ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವಿವಿದೊದ್ದೇಶಗಳ ಟ್ರಸ್ಟ್ ಮತ್ತು ಗದಗ ತಾಲೂಕ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಜಿಲ್ಲಾಧ್ಯಕ್ಷರಾದ ಜೆ.ಬಿ ಗಾರವಾಡ ಮಾತನಾಡಿ, ಕಲಬುರಗಿ ಜಿಲ್ಲೆ ಶಹಬಾದ ತಾಲೂಕಿನ ಮುತ್ತಗ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿ ಅಟ್ಟಹಾಸವನ್ನು ಮೆರೆದ ಕಿಡಿಗೆಡಿಗಳ ಕೃತ್ಯವನ್ನು ಗದಗ ಜಿಲ್ಲಾ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ವಿವಿದೊದ್ದೇಶಗಳ ಟ್ರಸ್ಟ್ ಮತ್ತು ಗದಗ ತಾಲೂಕ ಸಮಿತಿ, ಅಂಬಿಗರ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು. ಇದುವರೆಗೂ ಕಿಡಿಗೇಡಿಗಳ ಬಂಧನವಾಗದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಕೂಡಲೇ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ತಾಲೂಕ ಅಧ್ಯಕ್ಷರಾದ ಡಾ.ಗಣೇಶ ಸುಲ್ತಾನಪೂರ ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರಲ್ಲಿ ನಿಜಶರಣನಾಗಿ ತಮ್ಮ ಮೊನಚಾದ ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ ಶ್ರೇಷ್ಠ ಸಮಾಜ ಸುಧಾರಕನಿಗೆ ಈ ರೀತಿ ಅಪಮಾನ ಮಾಡಿರುವುದು ಇಡೀ ಮನುಕುಲಕ್ಕೆ ಮಾಡಿರುವ ಅವಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮಹಾಪುರುಷರ ಮೂರ್ತಿಗಳ ಭಗ್ನವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು ರಾಜ್ಯ ಸರ್ಕಾರವು ಇದಕ್ಕೆ ವಿಶೇಷ ಕಾನೂನು ಜಾರಿ ಮಾಡಿ ಇಂತಹ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಟ್ರಸ್ಟಿನ ಸದಸ್ಯರಾದ ಮಂಜುನಾಥ ಸುಣಗಾರ, ಶ್ರೀಧರ ಸುಲ್ತಾನಪುರ, ಸುಭಾಸ ಕದಡಿ, ಮುಖಂಡರಾದ ಪ್ರಕಾಶ ಪೂಜಾರ, ಬಸವರಾಜ ಜಿಗಳೂರ, ಹನಮಂತಪ್ಪ ಮಾನ್ವಿ, ಗೋಪಾಲ ಲಕ್ಷ್ಮೇಶ್ವರ, ಕೃಷ್ಣಾ ಬಾರಕೇರ, ವಿನೋದ ಜಕನೂರ, ನೀಲಕಂಠ ಗುಡಿಸಾಗರ, ಕಿರಣ ಕದಡಿ, ಜಿ.ಬಿ.ನರಗುಂದ, ನಾಗರಾಜ ಗುಡಿಸಾಗರ ಸೇರಿದಂತೆ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article