ಪ್ರಜಾಸ್ತ್ರ ಸುದ್ದಿ
ಗುವಾಹಟಿ(Guwahati): ಐಪಿಎಲ್ -2025ರ ಟೂರ್ನಿಯ 11ನೇ ಪಂದ್ಯ ಭಾನುವಾರ ರಾತ್ರಿ ಇಲ್ಲಿನ ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು. ಮೊದಲ ಎರಡು ಪಂದ್ಯಗಳಲ್ಲಿ ಸೋತಿದ್ದ ರಾಯಲ್ಸ್ ತಂಡ ಸಿಎಸ್ಕೆ ಐಪಿಎಲ್ -2025ರ ಟೂರ್ನಿಯ 11ನೇ ಪಂದ್ಯ ಭಾನುವಾರ ರಾತ್ರಿ ಇಲ್ಲಿನ ಬರ್ಸಾಪರ ಕ್ರಿಕೆಟ್ ಮೈದಾನದಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು. ಎದುರು ಗೆಲ್ಲುವ ಮೂಲಕ ವಿಜಯದ ಖಾತೆ ತೆರೆಯಿತು. ಸಿಎಸ್ಕೆ ಸತತ ಎರಡು ಸೋಲು ಕಂಡಿತು. ಟಾಸ್ ಗೆದ್ದಿದ್ದ ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಮೊದಲ ಬ್ಯಾಟ್ ಮಾಡಿದ ರಾಜಸ್ತಾನ್ ತಂಡ ನಿತೀಶ್ ರಾಣಾ ಭರ್ಜರಿ ಬ್ಯಾಟಿಂಗ್ ನಿಂದಾಗಿ 9 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲು ಸಾಧ್ಯವಾಯಿತು. 5 ಸಿಕ್ಸ್, 10 ಫೋರ್ ಗಳೊಂದಿಗೆ 36 ಬೌಲ್ ಗಳಲ್ಲಿ 81 ರನ್ ಬಾರಿಸುವ ಮೂಲಕ ಸಿಎಸ್ಕ್ ಬೌಲರ್ ಗಳನ್ನು ರಾಣಾ ಕಾಡಿದರು. ಮುಂದೆ ಅಶ್ವಿನ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಧೋನಿಗೆ ಕ್ಯಾಚ್ ಕೊಟ್ಟು ಔಟ್ ಆದರು. ನಾಯಕ ರಿಯಾನ್ ಪರಾಗ್ 37 ರನ್ ಗಳಿಸಿದರು. ಯುವ ಆಟಗಾರ ಯಶಸ್ವಿ ಜೈಸ್ವಾಲ್ 4, ಮಾಜಿ ನಾಯಕ ಸಂಜು ಸ್ಯಾಮ್ಸನ್ 20, ಧೃವ್ ಜುರ್ಲ್ 3, ಹಸರಂಗಾ 4 ರನ್ ಗಳಿಸಿ ನಿರಾಸೆ ಮೂಡಿಸಿದರು. ಸಿಎಸ್ಕ್ ಪರ ಖಲೀಲ್ ಅಹ್ಮದ್, ನೂರ್ ಅಹ್ಮದ್, ಮತೀಶ್ ಪತಿರಣಾ ತಲಾ 2 ವಿಕೆಟ್ ಪಡೆದರು. ಅಶ್ವಿನ್, ಜಡೇಜಾ ತಲಾ 1 ವಿಕೆಟ್ ಪಡೆದರು.
183 ರನ್ ಗಳ ಗುರಿ ಬೆನ್ನು ಹತ್ತಿದ ಸಿಎಸ್ಕ್ ಪಡೆಗೆ ಮೊದಲ ಓವರ್ ನಲ್ಲಿಯೇ ಜೊಫರ್ ಆರ್ಚರ್ ಶಾಕ್ ಕೊಟ್ಟು ರಚಿನ್ ರವೀಂದ್ರನನ್ನು ಡಕೌಟ್ ಮಾಡಿದರು. ಮುಂದೆ ತ್ರಿಪಾಠಿ ಹಾಗೂ ನಾಯಕ ಗಾಯಕ್ವಾಡ್ ಸ್ವಲ್ಪ ಆಸರೆಯಾದರು. ತ್ರಿಪಾಠಿ 23, ನಾಯಕ ಗಾಯಕ್ವಾಡ್ 63 ಹಾಗೂ ಬೌಲರ್ ಜಡೇಜಾ 32 ರನ್ ಗಳನ್ನು ಗಳಿಸಿದ್ದು ಬಿಟ್ಟರೆ ಉಳಿದವರಿಂದ ದೊಡ್ಡ ಆಟ ಬರಲಿಲ್ಲ. ಪಂದ್ಯ ಕೊನೆಯ ತನಕ ಹೋಗಿ ಕುತೂಹಲ ಮೂಡಿಸಿತ್ತು. ಯಾಕಂದ್ರೆ ಕ್ರಿಸ್ ನಲ್ಲಿ ಧೋನಿ ಇದ್ದರು. ಕೊನೆಯ ಓವರ್ ನಲ್ಲಿ 19 ರನ್ ಗಳ ಅವಶ್ಯಕತೆಯಿತ್ತು. ಹೀಗಾಗಿ ಸಿಕ್ಸ್ ಎತ್ತಲು ಹೋದ ಧೋನಿ ಲಾಂಗ್ ಆನ್ ನಲ್ಲಿ ಹೆಟ್ಮೇರ್ ಗೆ ಕ್ಯಾಚ್ ನೀಡಿದರು. ಆಗ ಸಿಎಸ್ಕೆ ಅಭಿಮಾನಿಗಳು ಫುಲ್ ಸೈಲೆಂಟ್. ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ರಾಜಸ್ತಾನ್ 6 ರನ್ ಗಳಿಂದ ರೋಚಕ ಗೆಲುವು ಸಾಧಸಿತು. ನಿತೀಶ್ ರಾಣಾ ಮ್ಯಾನ್ ಆಫ್ ದಿ ಪ್ಲೇಯರ್ ಆದರು.