ಪ್ರಜಾಸ್ತ್ರ ಸುದ್ದಿ
ಮುಂಬೈ(Mumbai): ಉದ್ಯಮಿ(Businessman) ಜಯ ಶೆಟ್ಟಿಯನ್ನು ಮೇ 4, 2001ರಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದೆ ವರ್ಷ ಗ್ಯಾಂಗ್ ಸ್ಟರ್ ಛೋಟಾ(Chhota Rajan) ರಾಜನ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೀಗ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಬಾಂಬೆ ಹೈಕೋರ್ಟ್(Bombay High Court) ಬುಧವಾರ ಜಾಮೀನು ನೀಡಿದೆ. 1 ಲಕ್ಷ ರೂಪಾಯಿ ಬಾಂಡ್ ಪಡೆದು ಬೇಲ್ ನೀಡಲಾಗಿದೆ.
ಛೋಟಾ ರಾಜನ್ ತಂಡದ ಹೇಮಂತ್ ಪೂಜಾರಿ ಶೆಟ್ಟಿಯಿಂದ ಹಣ ಸುಲಿಗೆಗಾಗಿ ಫೋನ್ ಮಾಡುತ್ತಿದ್ದ. ಹಣ ಕೊಡದಿದ್ದಕ್ಕೆ ಹೋಟೆಲ್ ನ ಮೊದಲ ಮಹಡಿಯಲ್ಲಿ 2001 ಮೇ 4ರಂದು ಗುಂಡಿಕ್ಕಿ ಕೊಲೆ(Mumrder) ಮಾಡಲಾಯಿತು. ಕೇಂದ್ರ ಮುಂಬೈನ ಗಾಮ್ ದೇವಿಯಲ್ಲಿ ಗೋಲ್ಡನ್ ಕ್ರೌನ್ ಹೆಸರಿನ ಹೋಟೆಲ್ ಅನ್ನು ಜಯ ಶೆಟ್ಟಿ ನಡೆಸುತ್ತಿದ್ದರು. ಹತ್ಯೆಯ ತನಿಖೆ ನಡೆದು ಇದರಲ್ಲಿ ಛೋಟಾ ರಾಜನ್ ಕೈವಾಡವಿದೆ ಇರುವುದು ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈಗ ಜಾಮೀನು(Bail) ಸಿಕ್ಕಿದೆ.