ಪ್ರಜಾಸ್ತ್ರ ಸುದ್ದಿ
ಕೊಪ್ಪಳ(Koppala): ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ತುಂಗಭದ್ರಾ(TB Dam) ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುತ್ತಿದ್ದರು. ಆದರೆ, ಡ್ಯಾಂನ 19ನೇ ಗೇಟ್ ಮುರಿದಿರುವುದರಿಂದ ಅದರ ಪರಿಶೀಲನೆ ಹಾಗೂ ಶೀಘರ್ರ ದುರಸ್ತಿ ಸಂಬಂಧ ಭೇಟಿ ನೀಡುತ್ತಿದ್ದಾರೆ. ವಿಶೇಷ ವಿಮಾನದ ಮೂಲಕ ಕೊಪ್ಪಳ ತಾಲೂಕಿನ ಗಿಣಿಗೇರಿಗೆ ಬರಲಿದ್ದಾರೆ. ಅಲ್ಲಿಂದ ಜಲಾಶಯದತ್ತ ಪ್ರಯಾಣ ಬೆಳಸಲಿದ್ದಾರೆ.
ಆಗಸ್ಟ್ 6ರಂದೇ ಬಾಗಿನ ಅರ್ಪಿಸಬೇಕಿತ್ತು. ಆಗಲಿಲ್ಲ, ಹೀಗಾಗಿ ಆಗಸ್ಟ್ 10ಕ್ಕೆ ಮುಂದೂಡಲಾಯಿತು. ಅದು ರದ್ದಾಗಿ ಆಗಸ್ಟ್ 13ಕ್ಕೆ ಅಂದರೆ ಇಂದು ನಿಗದಿಯಾಗಿತ್ತು. ಈಗ ಅದು ಇಲ್ಲದಾಗಿದೆ. ಹೀಗಾಗಿ ಸಚಿವರು, ಅಧಿಕಾರಿಗಳೊಂದಿಗೆ ಮುರಿದ ಗೇಟ್ ವೀಕ್ಷಿಸಿ ಶೀಘ್ರದಲ್ಲೇ ಅದರ ದುರಸ್ಥಿ ಕಾರ್ಯ ಸಂಬಂಧ ಚರ್ಚೆ ನಡೆಸಲಿದ್ದಾರೆ. ತುಂಗಭದ್ರಾ ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರ ರಾಜ್ಯಗಳ ಜನರ ಬದುಕಿನ ಕೊಂಡಿಯಾಗಿದೆ.