ಪ್ರಜಾಸ್ತ್ರ ಸುದ್ದಿ
ಬೆಳಗಾವಿ(Belagavi): ವಿಜಯಪುರ ಜಿಲ್ಲೆ ಸಿಂದಗಿಯ ಹಿರಿಯ ಮಕ್ಕಳ ಸಾಹಿತಿ ಹ.ಮ ಪೂಜಾರ ಹಾಗೂ ಶಿಕ್ಷಕ ಮತ್ತು ಮಕ್ಕಳ ಸಾಹಿತಿ ಎಸ್.ಎಸ್ ಸಾತಿಹಾಳ ಅವರಿಗೆ 2022-2023ನೇ ಸಾಲಿನ ಮಕ್ಕಳ ಚಂದಿರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಧಾರವಾಡದ ಬಾಲವಿಕಾಸ ಅಕಾಡೆಮಿ ವತಿಯಿಂದ ನೀಡುವ ಪ್ರಶಸ್ತಿಗೆ ಹ.ಮ ಪೂಜಾರ ಅವರ ‘ಅಜ್ಜನ ಮನೆಯ ಅಂಗಳದಲ್ಲಿ’ ಕಾದಂಬರಿ ಹಾಗೂ ಎಸ್.ಎಸ್ ಸಾತಿಹಾಳ ಅವರ ‘ಹಾಡು ಕೂಗಿಲೆ ಹಾಡು’ ಕವನ ಸಂಕಲನಕ್ಕೆ ಪ್ರಶಸ್ತಿ ನೀಡಲಾಗಿದೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು. 15 ಸಾವಿರ ರೂಪಾಯಿ, ಸ್ಮರಣಿಕೆ ನೀಡಲಾಘಿದೆ. ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸೇರಿದಂತೆ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.




