ಪ್ರಜಾಸ್ತ್ರ ಸುದ್ದಿ
ಕಲಬುರಗಿ(Kalaburagi): ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಹಾಪುರ-ಶಿವರಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿ 149ರಲ್ಲಿ ಮಧ್ಯಾಹ್ನ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಬೀದರ ಮೂಲದವರಾಗಿದ್ದು, ಅವಿನಾಶ ಸಿದ್ರಾಮ(24), ಅಭಿಷೇಕ ವಿಠಲರಾವ್(26) ಹಾಗೂ ಸಂಜು ಪುಂಡಲೀಕ(40) ಮೃತ ದುರ್ದೈವಿಗಳು. ಅರುಣ ಭೋಜಪ್ಪ, ನವೀನ ರಾಮ್ಲು, ವಿನೋದ ಪುಂಡಲೀಕ ಗಾಯಗೊಂಡವರು. ತಾಂಡೂರಿನತ್ತ ಹೊರಟಿದ್ದ ಕಾರು ಹಾಗೂ ಶಿವರಾಪುರದತ್ತ ಹೊರಟಿದ್ದ ಲಾರಿ ನಡುವೆ ಭೀಕರ ಅಪಘಾತವಾಗಿದೆ. ಕುಂಚಾವರಂ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.