Ad imageAd image

ಶಾಂತಿನಿಕೇತನ ಶಾಲೆಯ ಹಳ್ಳಿ ಹಬ್ಬದಲ್ಲಿ ಚಿಣ್ಣರ ಕಲರವ

Nagesh Talawar
ಶಾಂತಿನಿಕೇತನ ಶಾಲೆಯ ಹಳ್ಳಿ ಹಬ್ಬದಲ್ಲಿ ಚಿಣ್ಣರ ಕಲರವ
WhatsApp Group Join Now
Telegram Group Join Now

ಪ್ರಜಾಸ್ತ್ರ ಸುದ್ದಿ

ಸಿಂದಗಿ(Sindagi): ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮಂಗಳವಾರ ಹಳ್ಳಿ ಹಬ್ಬ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ನಡೆಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಕ ಸಿದ್ಧಲಿಂಗ ಚೌಧರಿ, ಇವತ್ತಿನ ಆಧುನಿಕ ಜೀವನ ಶೈಲಿಯಲ್ಲಿ ನಮ್ಮ ಮಕ್ಕಳಿಗೆ ಹಳ್ಳಿ ಜೀವನ ಪದ್ಧತಿ ತಿಳಿಯುತ್ತಿಲ್ಲ. ಅದನ್ನು ತಿಳಿಸಿಕೊಡುವ ಇಂತಹ ಹಳ್ಳಿ ಹಬ್ಬ ಮತ್ತು ವಿಜ್ಞಾನದ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಿಗೆ ಕಲಿಕೆ ಜೊತೆಗೆ ನಮ್ಮ ಸಂಸ್ಕೃತಿ ತಿಳಿಯುತ್ತೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಸುಧಾಕರ ಚವ್ಹಾಣ ಮಾತನಾಡಿ, ವಿದೇಶಿ ಅನುಕರಣೆ ಮಾಡುವ ಮೂಲಕ ನಮ್ಮ ಗ್ರಾಮೀಣ ಬದುಕಿನ ಸೊಗಡನ್ನು ಮರೆಯುತ್ತಿದ್ದೇವೆ. ನಮ್ಮ ಜಾನಪದ ಹಬ್ಬಗಳು, ಆಚರಣೆಗಳು ಕಣ್ಮರೆಯಾಗುತ್ತಿವೆ. ಅದನ್ನು ಮಕ್ಕಳಿಗೆ ತಿಳಿಸಿಕೊಡುವ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಅಂತಾ ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷ ಮಹಾಂತೇಶ ನೂಲಾನವರ ಮಾತನಾಡಿ, ಮಮ್ಮಿ, ಡ್ಯಾಡಿ ಸಂಸ್ಕೃತಿಯಲ್ಲಿ ಅಪ್ಪ, ಅಮ್ಮ ಅನ್ನುವ ನಮ್ಮತನವನ್ನು ಬಿಟ್ಟುಕೊಡಲಾಗುತ್ತಿದೆ. ಒಳ್ಳೆಯ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಮಕ್ಕಳಲ್ಲಿ ನಾವು ಬೆಳಸಬೇಕಾಗಿದೆ. ಆ ನಿಟ್ಟಿನಲ್ಲಿ ಇಂತಹ ಹಳ್ಳಿ ಹಬ್ಬ ಕಾರ್ಯಕ್ರಮಗಳ ಅವಶ್ಯಕತೆಯಿದೆ ಎಂದರು.

ಪ್ರಜಾಸ್ತ್ರ ವೆಬ್ ಪತ್ರಿಕೆಯ ಸಂಸ್ಥಾಪಕ ಸಂಪಾದಕ ನಾಗೇಶ ತಳವಾರ ಮಾತನಾಡಿ, ಹೆತ್ತವರು ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಹಿಂದೆ ಬೀಳದೆ, ಎಷ್ಟೇ ಕಷ್ಟವಾದರೂ ಉತ್ತಮ ಶಿಕ್ಷಣ ಕೊಡಿಸಿ. ಹೆಚ್ಚೆಚ್ಚು ಪುಸ್ತಕಗಳನ್ನು ಓದುವ ಪರಂಪರೆಯನ್ನು ಮಕ್ಕಳಲ್ಲಿ ಬೆಳಸಿ, ದಿನದಲ್ಲಿ ಸ್ವಲ್ಪ ಸಮಯವಾದರು ಮಕ್ಕಳೊಂದಿಗೆ ಕಳೆಯಬೇಕು. ಅಂದಾಗ ವಿದ್ಯಾಭ್ಯಾಸದ ಬಗ್ಗೆ ನಮಗೆ ತಿಳಿಯುತ್ತೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಶೇಖ್ ಮಾತನಾಡಿ, ಹಳ್ಳಿ ಹಬ್ಬ, ವಿಜ್ಞಾನ ವಸ್ತು ಪ್ರದರ್ಶನದ ಜೊತೆಗೆ ವಚನಕಾರರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಬೇಕು. ಇದಕ್ಕಾಗಿ ಶಾಲೆಯಲ್ಲಿ ಶರಣರ ಮೇಳ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಶರಣಗೌಡ ಬಿರಾದಾರ, ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದಾಗ ನನಗೆ ಮತ್ತು ನನ್ನ ತಮ್ಮನಿಗೆ 21, 22 ವರ್ಷ. ಅಲ್ಲಿಂದ ಇಲ್ಲಿಯ ತನಕ ಹಲವರ ಮಾರ್ಗದರ್ಶನ, ಸಹಾಯ, ಸಹಕಾರ, ಪರಿಶ್ರಮದಿಂದ ಒಂದು ಹಂತಕ್ಕೆ ಬಂದಿದ್ದೇವೆ ಅಂತಾ ಹೇಳಿದರು. ಸಂಸ್ಥೆಯ ಸಂಚಾಲಕ ಮಲ್ಲಿಕಾರ್ಜುನ ಬಿರಾದಾರ, ಮುಖ್ಯಗುರುಗಳಾದ ವಿಜಯಲಕ್ಷ್ಮಿ ಬಿರಾದಾರ, ಕಾವ್ಯ ಬಿರಾದಾರ, ಪೂಜಾ ಕರ್ನಾಳ, ಜಯಶ್ರೀ ಛಲವಾದಿ, ಮಲ್ಲಮ್ಮ ಕುಂಬಾರ, ಭಾರತಿ ಅಗಸರ, ವೈಷ್ಣವಿ ಗುತ್ತೇದಾರ, ಸಿದ್ದಮ್ಮ ಹರವಾಳ, ಕಲ್ಯಾಣಿ ಧೂಪ, ರಿಜ್ವಾನ್ ತಾಂಬೋಳಿ, ರಾಘವೇಂದ್ರ ನಾಯಕ, ಸಂಗಮೇಶ ಕರಡಿ, ಕುಮಾರ ಗುಡಿಮನಿ, ಗೋಕುಲ ನಾಯಕ, ಸುಧೀರ ಕೆಂಭಾವಿ, ಪಿ.ಎಸ್ ಸಾಸನೂರ, ಶಾಂತು ಬಿರಾದಾರ, ಪವನ ಕುಲಕರ್ಣಿ, ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Video: prajaastra kannada news (Facebook Page)

WhatsApp Group Join Now
Telegram Group Join Now
Share This Article