ಪ್ರಜಾಸ್ತ್ರ ಸುದ್ದಿ
ಹುಬ್ಬಳ್ಳಿ(Hubballi): ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಸದನದಲ್ಲಿ ಅಗೌರವದ ಪದ ಬಳಕೆ ಮಾಡಿದ್ದಾರೆ ಎನ್ನುವ ಪ್ರಕರಣ ಸಂಬಂಧ, ಸಭಾಪತಿ ಬಸವರಾಜ್ ಹೊರಟ್ಟಿಯವರು ಇಂದು ಮಾತನಾಡಿದ್ದಾರೆ. ಮೇಲ್ಮನೆಯಲ್ಲಿ ಸಿಐಡಿ ಅಧಿಕಾರಿಗಳಿಗೆ ಮಹಜರು ಮಾಡಲು ಅನುಮತಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಯಾವ ರೀತಿ ಮಹಜರು ಮಾಡುತ್ತಾರೆ ಎಂದು ಸಿಐಡಿಯವರು ಹೇಳಬೇಕಾಗುತ್ತದೆ. ಪಂಚನಾಮೆ ಮಾಡ್ತಾರೆ ಎಂದರೆ ಹೇಗೆ ಮಾಡುತ್ತಾರೆ ಎಂದು ಕೇಳಿದರು.
ಸದನ ಅಡ್ಡನ್ ಆಗಿದೆ. ಆಗ ನಮ್ಮ ಕ್ಯಾಮೆರಾ, ಆಡಿಯೋ, ವಿಡಿಯೋ ತನ್ನಿಂದ ತಾನೆ ಬಂದ್ ಆಗುತ್ತವೆ. ಮಾಧ್ಯಮದವರು ಆಡಿಯೋ, ವಿಡಿಯೋ ಕೊಟ್ಟರೆ ಎಫ್ಎಸ್ಎಲ್ ಗೆ ಕಳಿಸುತ್ತೇವೆ. ಸದನ ಲಾಕ್ ಆಗಿದೆ. ಪಂಚನಾಮೆ ಯಾವ ರೀತಿ ಮಾಡಬೇಕು ಎನ್ನುವುದು ಮೊದಲು ಸಿಐಡಿಯವರು ಹೇಳಲಿ. ಅನುಮತಿ ಕೊಡಬೇಕೋ ಬೇಡವೋ ಅನ್ನೋದು ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ. ಹೀಗಾಗಿ ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳುತ್ತೆ ನೋಡಬೇಕು.